"ಇವುಗಳು ವಾಸ್ತವವಾಗಿದ್ದರೆ, ನಿಜಕ್ಕೂ ದುಃಖಕರ": ಆರ್ಯನ್ ಖಾನ್ ಬೆಂಬಲಿಸಿ ಮತ್ತೆ ಪೋಸ್ಟ್ ಮಾಡಿದ ಹೃತಿಕ್ ರೋಶನ್

Update: 2021-10-28 11:47 GMT

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸದ್ಯ ಬಂಧನದಲ್ಲಿರುವ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‍ಗೆ  ಬೆಂಬಲವಾಗಿ ಬಾಲಿವುಡ್ ನಟ ಹೃತಿಕ್ ರೋಶನ್ ಅವರು ಮತ್ತೊಮ್ಮೆ  ಮಾತನಾಡಿದ್ದಾರೆ. ಹಿರಿಯ ವಕೀಲ ದುಷ್ಯಂತ್ ದವೆ ಅವರೊಂದಿಗೆ ಪತ್ರಕರ್ತೆ ಫಾಯೆ ಡಿ'ಸೋಜ ಅವರು  ನಡೆಸಿದ ಸಂದರ್ಶನವೊಂದರ ವೀಡಿಯೋ ಕ್ಲಿಪ್ ಶೇರ್ ಮಾಡಿದ  ಹೃತಿಕ್, "ಇವುಗಳು ವಾಸ್ತವವಾಗಿದ್ದರೆ, ನಿಜಕ್ಕೂ ದುಃಖಕರ" ಎಂದು ಬರೆದಿದ್ದಾರೆ.

ಆರ್ಯನ್ ಖಾನ್ ಸ್ನೇಹಿತ ಅರ್ಬಾಝ್ ಮರ್ಚೆಂಟ್ ಬಳಿ ಇತ್ತೆನ್ನಲಾದ ಡ್ರಗ್ಸ್ ಪ್ರಮಾಣಕ್ಕಿಂತಲೂ ದೊಡ್ಡ ಪ್ರಮಾಣದ ಡ್ರಗ್ಸ್ ಹೊಂದಿದ್ದ ಹಲವು ಮಂದಿಗೆ ಈ ಹಿಂದೆ  ಜಾಮೀನು ದೊರಕಿರುವ ಕುರಿತು ಈ ವೀಡಿಯೋ ಕ್ಲಿಪ್‍ನಲ್ಲಿ ಸುಪ್ರೀಂ ಕೋರ್ಟ್ ವಕೀಲರಾದ ದುಷ್ಯಂತ್ ದವೆ ಅವರು ಹೇಳುವುದು ಕೇಳಿಸುತ್ತದೆ.  

ಇನ್ನೊಂದು ಪ್ರಕರಣದಲ್ಲಿ ಡ್ರಗ್ಸ್ ಹೊಂದಿರುವ ವ್ಯಕ್ತಿಯೊಬ್ಬನ ಜತೆಗಿದ್ದಾತ ತನಗೇನೂ ಗೊತ್ತಿಲ್ಲ ಎಂದು ಹೇಳಿದಾಗ ಆತನ ಬಂಧನ ಬಿಡಿ, ಆತನ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿರಲಿಲ್ಲ ಎಂದು ದುಷ್ಯಂತ್ ದವೆ ಹೇಳುವುದು ಈ ವೀಡಿಯೋದಲ್ಲಿ ಕೇಳಿಸುತ್ತದೆ.

ಹೃತಿಕ್ ರೋಷನ್ ಅವರು ಈ ಹಿಂದೆ ಕೂಡ ಆರ್ಯನ್ ಖಾನ್ ಅವರನ್ನು ಬೆಂಬಲಿಸಿ ಹಾಗೂ ಅವರಿಗೆ ಆತ್ಮಸ್ಥೈರ್ಯ ತುಂಬಿಸುವಂತಹ ಒಂದು ಪೋಸ್ಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News