2ಜಿ ತರಂಗ ಹಗರಣದ ಕುರಿತು ತಾನು ಮಾಡಿದ್ದ ಆರೋಪಗಳಿಗೆ ಬೇಷರತ್‌ ಕ್ಷಮೆಯಾಚಿಸಿದ ಮಾಜಿ ಸಿಎಜಿ ವಿನೋದ್‌ ರೈ

Update: 2021-10-28 12:27 GMT

ಮುಂಬೈ: 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದರು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ಏಳು ವರ್ಷಗಳ ಬಳಿಕ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರಿಗೆ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವಿನೋದ್ ರೈ ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ ಎಂದು theprint ವರದಿ ಮಾಡಿದೆ.

ನಿರುಪಮ್ ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ರಾಯ್ ನೋಟರೈಸ್ ಅಫಿಡವಿಟ್ ರೂಪದಲ್ಲಿ ಕ್ಷಮೆಯಾಚಿಸಿದ್ದಾರೆ.

2014ರಲ್ಲಿ, ಮಾಧ್ಯಮ ಸಂದರ್ಶನವೊಂದರ ವೇಳೆ ವಿನೋದ್‌ ರೈ 2G  ತರಂಗಾಂತರ ಹಂಚಿಕೆ ಪ್ರಕರಣದ ವರದಿಯಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಹೊರಗಿಡುವಂತೆ ಒತ್ತಡ ಹೇರಿದ ಸಂಸದರಲ್ಲಿ ನಿರುಪಮ್ ಅವರನ್ನು ಹೆಸರಿಸಿದ್ದರು. ವಿನೋದ್‌ ರೈಯವರ ಪುಸ್ತಕವೊಂದು ಬಿಡುಗಡೆಯಾಗುವ ಸಂದರ್ಭದಲ್ಲಿ ಮಾಧ್ಯಮವು ಈ ಸಂದರ್ಶನವನ್ನು ಬಿಡುಗಡೆ ಮಾಡಿತ್ತು.

೨ಜಿ ತರಂಗಾಂತರ ಮತ್ತು ಕಲ್ಲಿದ್ದಲು ನಿಕ್ಷೇಪಗಳ ಕುರಿತಾದಂತೆ ಯುಪಿಎ ಸರಕಾರದ ವಿರುದ್ಧ ನಕಲಿ ವರದಿಗಳನ್ನು ಮಾಡಿದ್ದಕ್ಕಾಗಿ ರೈ ಇದೀಗ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ನಿರುಪಮ್‌ ಗುರುವಾರ ಅಫಿಡವಿಟ್‌ ಪ್ರತಿಯನ್ನು ಟ್ವೀಟ್‌ ಮಾಡಿದ್ದಾರೆ. 

ThePrint ಜೊತೆ ಮಾತನಾಡಿದ ನಿರುಪಮ್, “ವಿನೋದ್ ರಾಯ್ ಅವರ ಅಫಿಡವಿಟ್ ನಂತರ, ನಾನು ನ್ಯಾಯಾಲಯಕ್ಕೆ ಹೇಳಿದ್ದೇನೆ, ಸಮಸ್ಯೆ ಈಗ ನನ್ನ ಕಡೆಯಿಂದ ಮುಗಿದಿದೆ. ನ್ಯಾಯಾಲಯವು ನನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಇಂದು (ಗುರುವಾರ) ಬೆಳಗ್ಗೆ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ." ಎಂದು ಹೇಳಿದ್ದಾರೆ.

ಕಲ್ಲಿದ್ದಲು ಹಂಚಿಕೆಗಳ ಲೆಕ್ಕ ಪರಿಶೋಧನೆ ನಡೆಸಿದಾಗ ರಾಯ್‌ ಅವರು ಸಿಎಜಿಯಾಗಿ ಕಾರ್ಯ ನಿರ್ವಹಿಸಿದ್ದರು ಮತ್ತು ಆ ವೇಳೆ ಹಲವು ಅಕ್ರಮಗಳು ಪತ್ತೆಯಾಗಿತ್ತು. 2ಜಿ ಹಗರಣ ಹಂಚಿಕೆಯಲ್ಲಿ ಲಕ್ಷ ಕೋಟಿ ರೂ. ಮೌಲ್ಯದ ನಷ್ಟದ ಕುರಿತು ಅವರೇ ವರದಿ ತಯಾರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News