×
Ad

ದೇಶದ ಮೊದಲ ತೇಲುವ ಸಿನೆಮಾ ಮಂದಿರ ಜಮ್ಮುಕಾಶ್ಮೀರದಲ್ಲಿ ಆರಂಭ

Update: 2021-10-30 22:36 IST

ಹೊಸದಿಲ್ಲಿ, ಅ. 30: ದೇಶದ ಮೊದಲ ತೇಲುವ ಸಿನೆಮಾ ಮಂದಿರ ಜಮ್ಮು ಹಾಗೂ ಕಾಶ್ಮೀರದ ದಾಲ್ ಸರೋವರದಲ್ಲಿ ಆರಂಭಿಸಲಾಗಿದೆ.

ವಾರದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಸಂದರ್ಭ ಜಮ್ಮು ಹಾಗೂ ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅರುಣ್ ಮೆಹ್ತಾ ಈ ಸಿನೆಮಾ ಮಂದಿರವನ್ನು ಉದ್ಘಾಟಿಸಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಗೊಳಿಸುವ ಉದ್ದೇಶವನ್ನು ಈ ಸಿನೆಮಾ ಮಂದಿರ ಹೊಂದಿದೆ. ಈ ಸಿನೆಮಾ ಮಂದಿರದಲ್ಲಿ ಪ್ರವಾಸಿಗಳು ಹಾಗೂ ಇಲ್ಲಿನ ನಿವಾಸಿಗಳಿಗೆ ಬಾಲಿವುಡ್ ಚಲನಚಿತ್ರ ‘ಕಾಶ್ಮೀರ್ ಕಿ ಕಾಲಿ’ ಪ್ರದರ್ಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News