ಡ್ರಗ್ಸ್‌ ಪ್ರಕರಣ: ಮಾಡೆಲ್ ಮುನ್ಮುನ್ ಧಮೇಚಾ, ಅರ್ಬಾಝ್‌ ಮರ್ಚಂಟ್ ಜೈಲಿನಿಂದ ಬಿಡುಗಡೆ

Update: 2021-10-31 17:03 GMT

ಮುಂಬೈ, ಅ. 31: ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಎನ್ಸಿಬಿಯಿಂದ ಅಕ್ಟೋಬರ್ 3ರಂದು ಬಂಧಿತರಾಗಿದ್ದ ಫ್ಯಾಶನ್ ಮಾಡೆಲ್ ಮುನ್ಮುನ್ ಧಮೇಚಾ‌, ಅರ್ಬಾಝ್‌ ಮರ್ಚಂಟ್ ಅವರು ಬಾಂಬೆ ಉಚ್ಚ ನ್ಯಾಯಾಲಯದಿಂದ ಜಾಮೀನು ದೊರಕಿದ ಮೂರು ದಿನಗಳ ಬಳಿಕ ಬೈಕುಲಾದ ಮಹಿಳಾ ಕಾರಾಗೃಹದಿಂದ ರವಿವಾರ ಬಿಡುಗಡೆಯಾಗಿದ್ದಾರೆ. ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ ಅರ್ಬಾಝ್ ಮರ್ಚಂಟ್ ಅವರೊಂದಿಗೆ ಮುನ್ಮುನ್ ಧಮೇಚಾ ಅವರಿಗೆ ಕೂಡ ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿತ್ತು. ‌

ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಬಾಝ್ ಮರ್ಚಂಟ್ ಅವರ ತಂದೆ ಅಸ್ಲಾಂ ಮರ್ಚಂಟ್, ‘‘ನನಗೆ ತುಂಬಾ ಸಂತಸವಾಗಿದೆ. ಪುತ್ರ ಮನಗೆ ಮರಳುವ ವಿಚಾರ ತಿಳಿದು ಆತನ ತಾಯಿ ಕೂಡ ಸಂಸತಗೊಂಡಿದ್ದಾರೆ. ನಮ್ಮ ಪ್ರಾರ್ಥನೆ ಫಲ ನೀಡಿದೆ. ನಾವು ಜಾಮೀನಿನ ಎಲ್ಲ ಶರತ್ತನ್ನು ಅನುಸರಿಸಲಿದ್ದೇವೆ’’ ಎಂದಿದ್ದಾರೆ. 

ಆರ್ಯನ್ ಖಾನ್, ಮರ್ಚಂಟ್ ಹಾಗೂ ಧಮೇಚಾ ಜಾಮೀನು ನೀಡಲು ಮುಂಬೈ ಉಚ್ಚ ನ್ಯಾಯಾಲಯ ವೈಯುಕ್ತಿಕ ಬಾಂಡ್ ತಲಾ 1 ಲಕ್ಷ ರೂಪಾಯಿ, ಅದರೊಂದಿಗೆ ಅದೇ ಮೊತ್ತದ ಒಂದು ಅಥವಾ ಎರಡು ಶ್ಯೂರಿಟಿ ಸಲ್ಲಿಸಲು ಸೂಚಿಸಿತ್ತು. ಅಲ್ಲದೆ, 14 ಶರತ್ತು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News