×
Ad

ಮಾಜಿ ಮಿಸ್ ಕೇರಳ ಅನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಕಾರು ಅಪಘಾತಕ್ಕೆ ಬಲಿ

Update: 2021-11-01 11:04 IST
ಅನ್ಸಿ ಕಬೀರ್, ಅಂಜನಾ ಶಾಜನ್  (Photo: onmanorama.com)

ಕೊಚ್ಚಿ: 2019ರ ಮಿಸ್ ಕೇರಳ ವಿಜೇತೆ ಅನ್ಸಿ ಕಬೀರ್ ಹಾಗೂ ರನ್ನರ್-ಅಪ್ ಅಂಜನಾ ಶಾಜನ್ ಕೊಚ್ಚಿ ಸಮೀಪದ ವಿಟಿಲ್ಲಾದಲ್ಲಿ ಸೋಮವಾರ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಎರ್ನಾಕುಲಂ ಬೈಪಾಸ್ ನ ಹೋಲಿಡೇ ಇನ್ ಮುಂಭಾಗದಲ್ಲಿ ಬೆಳಗ್ಗೆ ಸುಮಾರು 1ಗಂಟೆಗೆ ಈ ಘಟನೆ ನಡೆದಿದೆ.

ಬೈಕ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದ ವೇಳೆ ಕಾರು ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅನ್ಸಿ ಕಬೀರ್ ತಿರುವನಂತಪುರದ ಮೂಲದವರಾದರೆ, ಅಂಜನಾ ಶಾಜನ್ ತ್ರಿಶೂರ್ ನವರಾಗಿದ್ದಾರೆ.

ಇಬ್ಬರೂ ಮಹಿಳೆಯರು ಅಪಘಾತ ಸಂಭವಿಸಿದ ತಕ್ಷಣವೇ ಮೃತಪಟ್ಟಿದ್ದಾರೆ. ಇಬ್ಬರು ಸಹ ಪ್ರಯಾಣಿಕರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಎರ್ನಾಕುಲಂ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News