×
Ad

ಅಜಿತ್ ಪವಾರ್ ಅವರ 1,000 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಂಡ ಐಟಿ ಇಲಾಖೆ

Update: 2021-11-02 11:37 IST

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗೆ ಸೇರಿರುವ  1,000 ಕೋಟಿ ರೂ.ಗೂ ಅಧಿಕ  ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು NDTV ವರದಿ ಮಾಡಿದೆ.

ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನಿರ್ಮಲ್ ಟವರ್ ಸೇರಿದಂತೆ ಐದು ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಪವಾರ್ ಅವರ ಸಹೋದರಿಯರ ಒಡೆತನದ ನಿವಾಸಗಳು ಹಾಗೂ ಸಂಸ್ಥೆಗಳಲ್ಲಿ ತೆರಿಗೆ ಶೋಧಗಳನ್ನು ನಡೆಸಲಾಯಿತು.

"ನಾವು ಪ್ರತಿ ವರ್ಷ ತೆರಿಗೆ ಪಾವತಿಸುತ್ತೇವೆ. ನಾನು ಹಣಕಾಸು ಸಚಿವನಾಗಿರುವುದರಿಂದ ಹಣಕಾಸಿನ ಶಿಸ್ತಿನ ಬಗ್ಗೆ ನನಗೆ ಅರಿವಿದೆ. ನನ್ನೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಕಂಪೆನಿ, ಘಟಕಗಳು ತೆರಿಗೆ ಪಾವತಿಸಿವೆ" ಎಂದು 62 ವರ್ಷದ ಎನ್‌ಸಿಪಿ ನಾಯಕ ಹೇಳಿದ್ದಾರೆ.

ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, "35 ರಿಂದ 40 ವರ್ಷಗಳ ಹಿಂದೆ ವಿವಾಹವಾದ ನನ್ನ ಸಹೋದರಿಯರ ಆಸ್ತಿ  ಮೇಲೆ ದಾಳಿ ನಡೆದಿರುವ ಕಾರಣ ನಾನು ಅಸಮಾಧಾನಗೊಂಡಿದ್ದೇನೆ. ಐಟಿ ಅಧಿಕಾರಿಗಳು ಅಜಿತ್ ಪವಾರ್ ಅವರ ಸಂಬಂಧಿಕರು ಎಂದು ದಾಳಿ ಮಾಡಿದ್ದರೆ, ಜನರು ಅದರ ಬಗ್ಗೆ ಯೋಚಿಸಬೇಕು. ...ಏಜೆನ್ಸಿಗಳನ್ನು (ತಪ್ಪಾಗಿ) ಬಳಸಲಾಗುತ್ತಿದೆ''ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News