×
Ad

ವಿರಾಟ್ ಕೊಹ್ಲಿ ಪುತ್ರಿಗೆ ಆನ್‌ಲೈನ್ ಬೆದರಿಕೆ: ಪೊಲೀಸರಿಗೆ ನೋಟಿಸ್ ನೀಡಿದ ದಿಲ್ಲಿ ಮಹಿಳಾ ಆಯೋಗ

Update: 2021-11-02 13:48 IST

ಹೊಸದಿಲ್ಲಿ: ಇತ್ತೀಚೆಗೆ ದುಬೈನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್  ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಕ್ರಿಕೆಟ್ ತಂಡದ ಸೋಲುಂಡ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ಅವರ 9 ತಿಂಗಳ ಮಗಳಿಗೆ ಆನ್‌ಲೈನ್ ಬೆದರಿಕೆಗಳ ಕುರಿತು ದಿಲ್ಲಿ  ಮಹಿಳಾ ಆಯೋಗವು ದಿಲ್ಲಿ  ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ ಎಂದು NDTV ವರದಿ ಮಾಡಿದೆ.

 9 ತಿಂಗಳ ಮಗುವಿಗೆ ಬೆದರಿಕೆ ಹಾಕಿರುವ ರೀತಿ 'ತುಂಬಾ ನಾಚಿಕೆಗೇಡು'. ಭಾರತ ತಂಡವು ನಮಗೆ ಸಾವಿರಾರು ಬಾರಿ ಹೆಮ್ಮೆ ತಂದಿದೆ, ಸೋಲಿನಲ್ಲಿ ಏಕೆ ಈ ಮೂರ್ಖತನ ಎಂದು ಮಹಿಳಾ ಸಂಸ್ಥೆಯ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News