×
Ad

ಜಮ್ಮು ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ಗಾಗಿ ಶೀಘ್ರ 122 ಎಕರೆ ಭೂಮಿ ಎಎಐಗೆ ಹಸ್ತಾಂತರ

Update: 2021-11-03 20:46 IST

ಜಮ್ಮು,ನ.3: ಜಮ್ಮು ವಿಮಾನ ನಿಲ್ದಾಣದಲ್ಲಿ 25,000 ಚ.ಮೀ.ವಿಸ್ತೀರ್ಣದ ಅತ್ಯಾಧುನಿಕ ನೂತನ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕಾಗಿ ಜಮ್ಮು-ಕಾಶ್ಮೀರ ಆಡಳಿತವು ಶೀಘ್ರವೇ 122 ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ಕ್ಕೆ ಹಸ್ತಾಂತರಿಸಲಿದೆ.

ನೂತನ ಟರ್ಮಿನಲ್‌ಗಾಗಿ 122 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಜಮ್ಮು ವಿಮಾನ ನಿಲ್ದಾಣದ ರನ್‌ವೇ ಅನ್ನು ವಿಸ್ತರಿಸಲಾಗಿದೆ ಮತ್ತು ಶೇ.30 ಲೋಡ್ ಪೆನಾಲ್ಟಿಯನ್ನು ರದ್ದುಗೊಳಿಸಲಾಗಿದೆ. ಇದು ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಭಾರೀ ನೆಮ್ಮದಿಯನ್ನು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜಮ್ಮು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಪಶು ಸಂಗೋಪನಾ ಇಲಾಖೆಗೆ ಸೇರಿದ 100 ಎಕರೆಗೂ ಅಧಿಕ ಭೂಮಿಯನ್ನು ಗುರುತಿಸಿರುವುದರಿಂದ ಅಲ್ಲಿರುವ ಪ್ರಾಣಿಗಳು ಮತ್ತು ತನ್ನ ಕಚೇರಿಗಳನ್ನು ಈಗಾಗಲೇ ಸೂಚಿಸಿರುವ ನಗ್ರೋತಾಕ್ಕೆ ಸ್ಥಳಾಂತರಿಸುವಂತೆ ಜಮ್ಮು ವಿಭಾಗಾಧಿಕಾರಿ ರಾಘವ ಲಂಗೇರ್ ಅವರು ಇಲಾಖೆಗೆ ನಿರ್ದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News