×
Ad

ಮಧ್ಯಪ್ರದೇಶ ಉಪಚುನಾವಣೆ: 2 ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಾಕ್ಕೆ ಮೂರನೇ ಸ್ಥಾನ

Update: 2021-11-04 00:02 IST

ಭೋಪಾಲ್: ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಾ (ನನ್ ಆಫ್ ದಿ ಎಬೋವ್) ಮೂರನೇ ಅತಿ ಹೆಚ್ಚು ಮತದಾನದ ಆಯ್ಕೆಯಾಗಿದ್ದು, ಒಂದು ಸ್ಥಾನದಲ್ಲಿ ನಾಲ್ಕನೇ ಹೆಚ್ಚು ಮತ ಪಡೆದಿದೆ.

ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಜೋಬಾಟ್ ಕ್ಷೇತ್ರದಲ್ಲಿ ಬಿಜೆಪಿಯ ಸುಲೋಚನಾ ರಾವತ್ ಅವರು ಕಾಂಗ್ರೆಸ್‌ನ ಮಹೇಶ್ ಪಟೇಲ್ ಅವರನ್ನು 6,104 ಮತಗಳ ಅಂತರದಿಂದ ಸೋಲಿಸಿದರೆ, ನೋಟಾ ಮೇಲೆ 5,603 ಮತಗಳು ಚಲಾವಣೆಯಾದವು.

ಪೃಥ್ವಿಪುರ ಕ್ಷೇತ್ರದಲ್ಲಿ ನೋಟಾ 1,741 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದೆ. ರಾಯಗಾಂವ್‌ನಲ್ಲಿ ನೋಟಾ 1,436 ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ 13,627 ಮತಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಫಲಿತಾಂಶವು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.

"ಚುನಾವಣಾ ಫಲಿತಾಂಶಗಳು ಮಧ್ಯಪ್ರದೇಶದ ಜನರು ಬಿಜೆಪಿಯಿಂದ ಬೇಸತ್ತಿದ್ದಾರೆ ಎಂದು ತೋರಿಸುತ್ತದೆ. ಆದರೆ ನೋಟಾಗೆ ಮತ ಹಾಕುವುದು ಕಾಂಗ್ರೆಸ್‌ಗೆ ಕಳವಳದ ವಿಷಯವಾಗಿದೆ. ನಾವು ಫಲಿತಾಂಶಗಳನ್ನು ಪರಿಶೀಲಿಸುತ್ತೇವೆ ಮತ್ತು ಅದರಂತೆ ಕೆಲಸ ಮಾಡುತ್ತೇವೆ" ಎಂದು ಮಾಜಿ ಸಚಿವ ಹಾಗೂ  ಹಿರಿಯ ಕಾಂಗ್ರೆಸ್ ನಾಯಕ ಜಿತು ಪಟ್ವಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News