ಉತ್ತರಪ್ರದೇಶದ ಕಾನ್ಪುರದಲ್ಲಿ ಮತ್ತೆ ಹೊಸ 30 ಝಿಕಾ ವೈರಸ್‌ ಪ್ರಕರಣ ದಾಖಲು

Update: 2021-11-05 06:13 GMT

ಉತ್ತರ ಪ್ರದೇಶದ ಕಾನ್ಪುರ್ ನಗರದಲ್ಲಿ ಗುರುವಾರ 30 ಹೊಸ ಝಿಕಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಅಕ್ಟೋಬರ್ 23 ರಿಂದ ಸೋಂಕಿನ ಸಂಖ್ಯೆಯು 66 ಕ್ಕೆ ಏರಿಕೆಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. 

ಅಕ್ಟೋಬರ್‌ 23ರಂದು ನಗರದಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು, ಇದೀಗ ಮತ್ತಷ್ಟು ಏರಿಕೆಯಾಗಿದೆ. ಆರೋಗ್ಯ ಅಧಿಕಾರಿಗಳು ವಿಶೇಷ ಆಸಕ್ತಿಯ ಪ್ರದೇಶವೆಂದು ಗುರುತಿಸಲಾದ ಮೂರು ಕಿಲೋಮೀಟರ್ ತ್ರಿಜ್ಯದ ಹೊರಗೆಯೂ ಸೋಂಕುಗಳು ವರದಿಯಾಗಿವೆ. ಕಾನ್ಪುರದಲ್ಲಿ ವರದಿಯಾದ ಪ್ರಕರಣಗಳಿಗೆ ಸಂಬಂಧಿಸಿದ ರೋಗಿಗಳಲ್ಲಿ ಮಕ್ಕಳೂ ಸೇರಿದ್ದಾರೆಂದು timesofindia.com ವರದಿ ಮಾಡಿದೆ. 

ಎಲ್ಲಾ ಮಾದರಿಗಳನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಝಿಕಾ ವೈರಸ್ ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ, ಇದು ಹಗಲಿನಲ್ಲಿ ಕಚ್ಚುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದು ಲೈಂಗಿಕವಾಗಿಯೂ ಹರಡಬಹುದಾಗಿದ್ದು, ಜ್ವರ, ತಲೆನೋವು, ಕೀಲು ನೋವು, ಶರೀರದಲ್ಲಿ ದದ್ದುಗಳು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News