×
Ad

ಡ್ರಗ್ಸ್ ಪ್ರಕರಣ:ಎನ್ ಸಿಬಿಯ ದಿಲ್ಲಿ ಜಾಗೃತ ದಳ ಮುಂಬೈಗೆ ಭೇಟಿ, ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ವಿಚಾರಣೆ ಸಾಧ್ಯತೆ

Update: 2021-11-08 13:22 IST

ಮುಂಬೈ: ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಲಂಚ ಬೇಡಿಕೆಯ ಆರೋಪದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ದಿಲ್ಲಿ ವಿಜಿಲೆನ್ಸ್ ತಂಡ ಸೋಮವಾರ ಇಲ್ಲಿಗೆ ಆಗಮಿಸಿದೆ. ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಹಾಗೂ  ಎನ್‌ಸಿಬಿಯ ಸಾಕ್ಷಿದಾರ ಕೆ.ಪಿ. ಗೋಸಾವಿ ಭೇಟಿಯಾದರು ಎಂದು ಹೇಳಲಾದ ಲೋವರ್ ಪರೇಲ್ ಪ್ರದೇಶದ ಇಂಡಿಯಾನಾ ಹೋಟೆಲ್‌ನ ಹೊರಗೆ ತಂಡವು ಭೇಟಿ ನೀಡಿತು.

ತಂಡದ ಸದಸ್ಯರು ಮುಂಬೈ ಕ್ರೂಸ್ ಟರ್ಮಿನಲ್‌ಗೆ ಭೇಟಿ ನೀಡಿದರು. ಅಲ್ಲಿ ಅಕ್ಟೋಬರ್ 2 ರಂದು ಪಾರ್ಟಿಯನ್ನು ಆಯೋಜಿಸಲಾಗಿದ್ದ ಕಾರ್ಡೆಲಿಯಾ ಕ್ರೂಸ್ ಹಡಗು ಡಾಕ್ ಮಾಡಲಾಗಿದೆ.

ಎನ್‌ಸಿಬಿಯ ಉಪ ಮಹಾನಿರ್ದೇಶಕ (ಉತ್ತರ ವಲಯ) ಜ್ಞಾನೇಶ್ವರ್ ಸಿಂಗ್ ನೇತೃತ್ವದ ನಾಲ್ಕೈದು ಸದಸ್ಯರ ತಂಡವು ಇತರ ಕೆಲವು ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ ಹಾಗೂ  ಪ್ರಕರಣದ ಸ್ವತಂತ್ರ ಸಾಕ್ಷಿದಾರ ಪ್ರಭಾಕರ್ ಸೈಲ್ ಅವರ ಹೇಳಿಕೆಯನ್ನು ಸಹ ದಾಖಲಿಸಿಕೊಳ್ಳಲಿದೆ.

ಗೋಸಾವಿಯ ಅಂಗರಕ್ಷಕ ಎಂದು ಹೇಳಿಕೊಂಡಿರುವ ಸೈಲ್‌ಗೆ ಎನ್‌ಸಿಬಿ ರವಿವಾರ ಸಮನ್ಸ್ ಜಾರಿ ಮಾಡಿದೆ.

ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿದ ನಂತರ ಗೋಸಾವಿ 25 ಕೋಟಿ ರೂಪಾಯಿಗಳ ಪಾವತಿಯ ಒಪ್ಪಂದವನ್ನು ಚರ್ಚಿಸುತ್ತಿರುವುದನ್ನು ಕೇಳಿದ್ದೇನೆ ಎಂದು ಸೈಲ್ ಕಳೆದ ತಿಂಗಳು ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News