ಅನುಮಾನಾಸ್ಪದ ಪ್ರಯಾಣಿಕರ ಬಗ್ಗೆ ಪೊಲೀಸರಿಗೆ ಟ್ಯಾಕ್ಸಿ ಚಾಲಕ ಸುಳಿವು:ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ಭದ್ರತೆ ಹೆಚ್ಚಳ

Update: 2021-11-08 12:33 GMT

ಹೊಸದಿಲ್ಲಿ: ಅನುಮಾನಾಸ್ಪದ ಪ್ರಯಾಣಿಕರ ಬಗ್ಗೆ ಟ್ಯಾಕ್ಸಿ ಡ್ರೈವರ್ ಮುಂಬೈ ಪೊಲೀಸರಿಗೆ ಸುಳಿವು ನೀಡಿದ ನಂತರ  ಮುಂಬೈನಲ್ಲಿರುವ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಸುತ್ತಮುತ್ತ ಪೊಲೀಸರ ನಿಯೋಜನೆಯನ್ನು ಹೆಚ್ಚಿಸಲಾಗಿದೆ.

ಮುಂಬೈ ಪೊಲೀಸರ ಪ್ರಕಾರ ಸೋಮವಾರ ನಿಯಂತ್ರಣ ಕೊಠಡಿಗೆ ಬಂದ ಕರೆ ಆಂಟಿಲಿಯಾ ಹೊರಗೆ ಹೆಚ್ಚುವರಿ ಭದ್ರತೆ ನಿಯೋಜನೆಗೆ ಕಾರಣವಾಯಿತು.

ತನ್ನ ಪ್ರವಾಸಿ ಟ್ಯಾಕ್ಸಿಯಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ಮುಂಬೈನಲ್ಲಿರುವ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ವಿಳಾಸವನ್ನು ಕೇಳಿದರು ಎಂದು ಕರೆ ಮಾಡಿದ ಟ್ಯಾಕ್ಸಿ ಡ್ರೈವರ್ ಹೇಳಿದ್ದಾನೆ. ಪ್ರಯಾಣಿಕರು ಬ್ಯಾಗ್ ಹೊತ್ತೊಯ್ದಿದ್ದರು ಎಂದು ಟ್ಯಾಕ್ಸಿ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ ಎಂದು ನಂಬಲಾಗಿದೆ.

ಚಾಲಕನು ಆಝಾದ್ ಮೈದಾನ ಪೊಲೀಸ್ ಠಾಣೆಯಲ್ಲಿದ್ದು, ಅಲ್ಲಿ ಚಾಲಕನ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ.

ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಆದಾಗ್ಯೂ, ಇಬ್ಬರು ಪ್ರಯಾಣಿಕರನ್ನು ಹುಡುಕಲು ವಿವಿಧ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News