ದಿಲ್ಲಿ ಗಲಭೆಗಳ ಯುಎಪಿಎ ಪ್ರಕರಣದಲ್ಲಿ ಸಾಕ್ಷಿಗಳ ಕಪೋಲಕಲ್ಪಿತ ಹೇಳಿಕೆ: ನ್ಯಾಯಾಲಯಕ್ಕೆ ತಿಳಿಸಿದ ಉಮರ್ ಖಾಲಿದ್

Update: 2021-11-08 17:10 GMT

ಹೊಸದಿಲ್ಲಿ, ನ. 8: ಈಶಾನ್ಯ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿ ಯಎಪಿಎ ಅಡಿಯ ಪ್ರಕರಣಗಳ ಸಾಕ್ಷಿಗಳು ಕಪೋಲಕಲ್ಪಿತ ಹೇಳಿಕೆ ನೀಡಿದ್ದಾರೆ ಎಂದು ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ಪ್ರತಿನಿಧಿಸಿದ ವಕೀಲರು ಸೋಮವಾರ ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ಉಮರ್ ಖಾಲಿದ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ತ್ರಿದೀಪ್ ಪಾಯಸ್ ಅವರು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಮಿತಾಬ್ ರಾವತ್ ಮುಂದೆ ವಾದ ಮಂಡಿಸಿದರು. ನ್ಯಾಯಾಲಯ ವಾದವನ್ನು ನವೆಂಬರ್ 16ರಂದು ಆಲಿಸಲಿದೆ. ಪ್ರಸ್ತುತ ಅಧಿಕಾರಿಗಳಿಂದ ತನಿಖೆಗೆ ಒಳಗಾಗುತ್ತಿರುವ ವ್ಯಾಟ್ಸ್ ಆ್ಯಪ್ ಗುಂಪು ‘ದಿಲ್ಲಿ ಪ್ರೊಟೆಸ್ಟ್ ಸಪೋರ್ಟ್ ಗ್ರೂಪ್ (ಡಿಪಿಎಸ್ಜಿ)’ ಗೆ ಉಮರ್ ಖಾಲಿದ್ ಅವರು ಕೇವಲ ನಾಲ್ಕು ಸಂದೇಶಗಳನ್ನು ಮಾತ್ರ ರವಾನಿಸಿದ್ದಾರೆ ಎಂದು ಪಾಯಸ್ ಅವರು ನ್ಯಾಯಾಲಯಕ್ಕೆ ತಿಳಿಸಿದರು. 

‘‘ವ್ಯಾಟ್ಸ್ ಆ್ಯಪ್ ಗುಂಪು ಆರಂಭವಾದ ಬಳಿಕ ಕೇವಲ ನಾಲ್ಕು ಸಂದೇಶಗಳನ್ನು ಮಾತ್ರ ಕಳುಹಿಸಲಾಗಿದೆ. ಸಂದೇಶದ ಪ್ರಮಾಣದ ಮೂಲಕ ಅಪರಾಧದವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಸಂದೇಶದ ಗುಣಮಟ್ಟ ಅಪರಾಧದಲ್ಲಿ ಅವರ ಯಾವುದೇ ಪಾತ್ರ ಇಲ್ಲದೇ ಇರುವುದನ್ನು ತೋರಿಸಿಕೊಟ್ಟಿದೆ ’’ ಎಂದು ಪಾಯಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News