ನ.29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ

Update: 2021-11-08 18:12 GMT

ಹೊಸದಿಲ್ಲಿ,ನ.8: ಸಂಸತ್ತಿನ ಚಳಿಗಾಲದ ಅಧಿವೇಶನವು ನ.29ರಂದು ಆರಂಭಗೊಂಡು ಡಿ.23ರವರೆಗೆ ನಡೆಯಲಿದೆ. ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಈ ದಿನಾಂಕಗಳಿಗೆ ಒಪ್ಪಿಗೆಯನ್ನು ನೀಡಿದೆ. ಅಧಿವೇಶನದಲ್ಲಿ 20 ದಿನಗಳ ಕಾಲ ಕಲಾಪಗಳು ನಡೆಯಲಿವೆ.

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದಿಂದಾಗಿ ಚಳಿಗಾಲದ ಅಧಿವೇಶನವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಹಿಂದಿನ ಮೂರು ಸಂಸತ್ ಅಧಿವೇಶನಗಳೂ ಕೋವಿಡ್‌ನಿಂದಾಗಿ ಮೊಟಕುಗೊಂಡಿದ್ದವು. ಮುಂಬರುವ ಚಳಿಗಾಲದ ಅಧಿವೇಶನವೂ ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿರಲಿದೆ.

ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಏಕಕಾಲದಲ್ಲಿ ಕಲಾಪಗಳು ನಡೆಯಲಿವೆ. ಉಭಯ ಸದನಗಳಲ್ಲಿ ಸದಸ್ಯರು ಸುರಕ್ಷಿತ ಅಂತರ ಮತ್ತು ಇತರ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಅಗತ್ಯವಾಗಿರಲಿದೆ.
ಪಂಜಾಬ್,ಉತ್ತರಾಖಂಡ,ಉತ್ತರ ಪ್ರದೇಶ,ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಿಗೆ ಮುನ್ನ ನಡೆಯಲಿರುವ ಈ ಅಧಿವೇಶನವು ಕಾವೇರುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News