×
Ad

ಭಾರತ, ಪಾಕಿಸ್ತಾನಕ್ಕೆ ಭೇಟಿ ನೀಡಲಿರುವ ಅಫ್ಘಾನಿಸ್ತಾನ ಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿ

Update: 2021-11-09 22:01 IST
photo:TOI

ವಾಷಿಂಗ್ಟನ್, ನ.9: ಮುಂಬರುವ ಯುರೋಪ್ ಮತ್ತು ಏಶ್ಯಾ ಪ್ರವಾಸದ ಸಂದರ್ಭ ತಾನು ಭಾರತ ಪಾಕಿಸ್ತಾನ ಮತ್ತು ರಶ್ಯಾಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದೇನೆ ಎಂದು ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ಥಾಮಸ್ ವೆಸ್ಟ್ ಹೇಳಿದ್ದಾರೆ.

ಯುರೋಪ್ ಮತ್ತು ಏಶ್ಯಾ ಪ್ರವಾಸದ ಸಂದರ್ಭ ಅಫ್ಘಾನಿಸ್ತಾನ ಹಾಗೂ ಅಂತರಾಷ್ಟ್ರೀಯ ಸಹಭಾಗಿ ದೇಶಗಳಿಗೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚಿಸಲಿದ್ದೇನೆ. ಅಂತರಾಷ್ಟ್ರೀಯ ಸಮುದಾಯ ಒಗ್ಗೂಡಿ ಕಾರ್ಯನಿರ್ವಹಿಸಿದರೆ ಹೆಚ್ಚು ಪರಿಣಾಮ ಬೀರಬಹುದು. ಈ ವಾರಾಂತ್ಯದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದೇನೆ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ಥಾಮಸ್ ವೆಸ್ಟ್ ರವಿವಾರ ಟ್ವೀಟ್ ಮಾಡಿದ್ದಾರೆ.

ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯ ಹುದ್ದೆ ನಿರ್ವಹಿಸುವ ಅವಕಾಶ ಸಿಕ್ಕಿರುವುದು ಬಹುದೊಡ್ಡ ಗೌರವವಾಗಿದ್ದು ಅಮೆರಿಕದ ಪ್ರಮುಖ ಹಿತಾಸಕ್ತಿಯನ್ನು ಮುಂದುವರಿಸಲು ಮತ್ತು ಅಫ್ಘಾನ್ ಜನತೆಯನ್ನು ಬೆಂಬಲಿಸುವ ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News