ಕೋವ್ಯಾಕ್ಸಿನ್ ಬಳಕೆಗೆ ವಿಯೆಟ್ನಾಮ್ ಅಂಗೀಕಾರ
Update: 2021-11-10 20:39 IST
ಹನೋಯಿ (ವಿಯೆಟ್ನಾಮ್), ನ. 10: ತುರ್ತು ಬಳಕೆಗೆ ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ವಿಯೆಟ್ನಾಮ್ ಅಂಗೀಕಾರ ನೀಡಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಇದು ದೇಶದಲ್ಲಿ ಅಂಗೀಕಾರ ಪಡೆದ ಒಂಭತ್ತನೇ ಲಸಿಕೆಯಾಗಿದೆ.
ಭಾರತ್ ಬಯೋಟೆಕ್ ತಯಾರಿಸಿರುವ ಕೋವ್ಯಾಕ್ಸಿನ್ ಲಸಿಕೆಯ 1.5 ಕೋಟಿ ಡೋಸ್ ಗಳನ್ನು ಪಡೆದುಕೊಳ್ಳುವುದಾಗಿ ಸರಕಾರ ಜುಲೈಯಲ್ಲಿ ಹೇಳಿತ್ತು.