ನೋಟು ಅಮಾನ್ಯೀಕರಣದ ಗುರಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಚಿದಂಬರಂ

Update: 2021-11-12 16:46 GMT

ಹೊಸದಿಲ್ಲಿ: ನೋಟು ಅಮಾನ್ಯೀಕರಣದ ಕುರಿತು ಶುಕ್ರವಾರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಅದರ ಗುರಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಚಲಾವಣೆಯಲ್ಲಿರುವ ನಗದು 'ಏರಿಕೆ'ಯನ್ನು ಬೆಟ್ಟು ಮಾಡಿದ್ದಾರೆ.

 "ಕುಖ್ಯಾತ ನೋಟು ಅಮಾನ್ಯೀಕರಣದ ಐದು ವರ್ಷಗಳ ನಂತರ ಮೋದಿ ಸರಕಾರದ ಉದಾತ್ತ ಘೋಷಣೆಗಳ ಸ್ಥಿತಿ ಏನು" ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

" (ನರೇಂದ್ರ) ಮೋದಿಯವರು ಮೊದಲು ನಾವು ನಗದು ರಹಿತ ಆರ್ಥಿಕತೆಯಾಗಬೇಕು ಎಂದು ಹೇಳಿದರು! ಕೆಲವೇ ದಿನಗಳಲ್ಲಿ ಅದು ಅಸಂಬದ್ಧ ಗುರಿ ಎಂದು ಅವರು ಅರಿತುಕೊಂಡರು. ಅವರು ಗುರಿಯನ್ನು ಕಡಿಮೆ ನಗದು ಆರ್ಥಿಕತೆಗೆ ಮಾರ್ಪಡಿಸಿದರು! ನೋಟು ಅಮಾನ್ಯೀಕರಣದ ಸಮಯದಲ್ಲಿ, ಚಲಾವಣೆಯಲ್ಲಿದ್ದ ನಗದು ಸುಮಾರು 18 ಲಕ್ಷ ರೂ.ವಾಗಿತ್ತು. ಇಂದು ಅದು 28.5 ಲಕ್ಷ ಕೋಟಿ!" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಹೆಚ್ಚಿನ ನಿರುದ್ಯೋಗ ಹಾಗೂ  ಹಣದುಬ್ಬರಕ್ಕೆ ಧನ್ಯವಾದಗಳು, ಬಡವರು ಹಾಗೂ  ಕೆಳ ಮಧ್ಯಮ ವರ್ಗದವರು ಕಡಿಮೆ ಹಣ ಗಳಿಸುತ್ತಾರೆ ಮತ್ತು ಕಡಿಮೆ ಖರ್ಚು ಮಾಡುತ್ತಾರೆ. ನಾವು ನಿಜವಾಗಿಯೂ ಕಡಿಮೆ ನಗದು ಹೊಂದಿರುವ  ಆರ್ಥಿಕತೆಯಾಗಿದ್ದೇವೆ! ಥ್ರೀ ಚೀರ್ಸ್!" ಮಾಜಿ ವಿತ್ತ ಸಚಿವರು ವ್ಯಂಗ್ಯವಾಡಿದರು.

ನೋಟು ಅಮಾನ್ಯೀಕರಣದ ಐದು ವರ್ಷಗಳ ನಂತರ ಹೆಚ್ಚು ಹೆಚ್ಚು ಜನರು ನಗದು ರಹಿತ ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಡಿಜಿಟಲ್ ಪಾವತಿಗಳು ಹೆಚ್ಚುತ್ತಿರುವಾಗಲೂ ಕೂಡ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು ನಿಧಾನಗತಿಯಲ್ಲಿ ಏರಿಕೆಯಾಗುತ್ತಲೇ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News