ಇಮೇಲ್‍ನಲ್ಲಿ ಅಕ್ಷರ ತಪ್ಪಾಗಿದೆ ಎಂದು ಚಲನಚಿತ್ರೋತ್ಸವದಿಂದ ಬಂಗಾಳ ಸಚಿವರ ಸಿನೆಮಾವನ್ನೇ ಕೈಬಿಟ್ಟ ಐಎಫ್ಎಫ್ಐ!

Update: 2021-11-13 12:36 GMT
Photo: thewire.in

ಕೊಲ್ಕತ್ತಾ: ಗೋವಾದಲ್ಲಿ ನವೆಂಬರ್ 20ರಿಂದ 28ರ ತನಕ ನಡೆಯಲಿರುವ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಪೆನೋರಮ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದ್ದ ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಹಾಗೂ ಖ್ಯಾತ ರಂಗಕರ್ಮಿ ಮತ್ತು ಚಿತ್ರ ತಯಾರಕ ಬ್ರತ್ಯ ಬಸು ಅವರ ಚಲನಚಿತ್ರ 'ಡಿಕ್ಷನರಿ'ಯನ್ನು ಪ್ರದರ್ಶನಗೊಳ್ಳಲಿರುವ ಸಿನೆಮಾಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇಮೇಲ್ ಒಂದರಲ್ಲಿ ಚಿತ್ರದ ನಿರ್ದೇಶಕರ ಹೆಸರಿನ ಸ್ಪೆಲ್ಲಿಂಗ್ ಅನ್ನು ತಪ್ಪಾಗಿ ಬರೆದಿರುವುದೇ ಇದಕ್ಕೆ ಕಾರಣ ಎಂದರೆ ಯಾರಿಗೂ ಅಚ್ಚರಿಯಾಗದೇ ಇರದು. ಈ ವಿಷಯವನ್ನು ಸ್ವತಃ ಬಸು ಬಹಿರಂಗಗೊಳಿಸಿದ್ದಾರೆ ಎಂದು thewire.in ವರದಿ ಮಾಡಿದೆ.

"ಈ ರೀತಿ ಮಾಡಲು ಇಮೇಲ್‍ನಲ್ಲಿ ಹೆಸರನ್ನು ತಪ್ಪಾಗಿ ಉಚ್ಛರಿಸಲಾಗಿದೆ ಎಂಬುದು ಕೇವಲ ಒಂದು ನೆಪ. ಅವರು ಪ್ರಾಯಶಃ ದಿಲ್ಲಿಯಲ್ಲಿರುವ ತಮ್ಮ ಬಾಸ್‍ಗಳಿಂದ ಒತ್ತಡ ಎದುರಿಸಿರಬೇಕು, ಅದಕ್ಕಾಗಿ ಚಿತ್ರವನ್ನು ಕೈಬಿಡಲು ಒಂದು ವಿಚಿತ್ರ ಕಾರಣ ಮುಂದಿಟ್ಟಿದ್ದಾರೆ,'' ಎಂದು ಬಸು ಹೇಳಿದ್ದಾರೆ. 

ನಟಿ ಹಾಗೂ ತೃಣಮೂಲ ಸಂಸದೆ ನುಸ್ರತ್ ಜಹಾನ್, ಖ್ಯಾತ ನಟ ಅಬೀರ್ ಚಟರ್ಜಿ ಮತ್ತಿತರರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News