ವಿಶ್ವಕಪ್ ದಾಖಲೆ ನಿರ್ಮಿಸುವ ಹಾದಿಯಲ್ಲಿ ಡೇವಿಡ್ ವಾರ್ನರ್

Update: 2021-11-14 06:44 GMT
photo: twitter

ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ  ನ್ಯೂಝಿಲ್ಯಾಂಡ್  2021 ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ರವಿವಾರ ಸ್ಪರ್ಧಿಸಲಿವೆ. 2010 ರಲ್ಲಿ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಎರಡನೇ ಬಾರಿ ಫೈನಲ್ ನಲ್ಲಿ ಆಡಲಿದೆ.  ನ್ಯೂಝಿಲ್ಯಾಂಡ್‌ಗೆ ಇದು ಮೊದಲ ಟ್ವೆಂಟಿ-20 ವಿಶ್ವಕಪ್ ಫೈನಲ್‌.

ಯುಎಇ ಹಾಗೂ  ಒಮಾನ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಬ್ಯಾಟ್‌ನೊಂದಿಗೆ ತಂಡಕ್ಕೆ ಆಧಾರಸ್ತಂಭವಾಗಿದ್ದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಂದ  ಆಸ್ಟ್ರೇಲಿಯನ್ನರು ಮತ್ತೊಮ್ಮೆ ಉತ್ತಮದ ಆಟದ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಕಳಪೆ ಫಾರ್ಮನಲ್ಲಿದ್ದ ವಾರ್ನರ್ ಇದೀಗ ಆಸ್ಟ್ರೇಲಿಯಾವನ್ನು ಚೊಚ್ಚಲ ಟ್ವೆಂಟಿ-20 ಪ್ರಶಸ್ತಿಯತ್ತ ಮುನ್ನಡೆಸುತ್ತಿದ್ದಾರೆ.

ಒಟ್ಟು  236 ರನ್‌ಗಳೊಂದಿಗೆ ವಾರ್ನರ್ ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ  ಗರಿಷ್ಟ ರನ್ ಸ್ಕೋರರ್ ಆಗಿದ್ದಾರೆ. ಟಿ-20 ವಿಶ್ವಕಪ್ ಏಕೈಕ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಪರ ಅತ್ಯಂತ ಹೆಚ್ಚು ರನ್ ಗಳಿಸಲು ಎಡಗೈ ಆಟಗಾರನಿಗೆ ಕೇವಲ 30 ರನ್‌ಗಳ ಅಗತ್ಯವಿದೆ.

ಅವರು 30 ರನ್ ಗಳಿಸಿದರೆ 2007 ರಲ್ಲಿ ಮ್ಯಾಥ್ಯೂ ಹೇಡನ್  (265 ರನ್) ಹಾಗೂ 2012ರಲ್ಲಿ ಶೇನ್ ವ್ಯಾಟ್ಸನ್ (249 )ನಿರ್ಮಿಸಿದ್ದ ದಾಖಲೆಯನ್ನು ಮುರಿಯಲಿದ್ದಾರೆ.

ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ವಾರ್ನರ್ ಒಟ್ಟು   14 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನೂ ಎರಡು ಸಿಕ್ಸರ್‌ ಸಿಡಿಸಿದರೆ ಅವರು ಪಾಕಿಸ್ತಾನದ ಶಾಹಿದ್ ಅಫ್ರಿದಿಯವರನ್ನು ಮೀರಿಸುತ್ತಾರೆ. ಅಫ್ರಿದಿ  ದುಬೈನಲ್ಲಿ ಒಟ್ಟು 15 ಸಿಕ್ಸರ್ ಗಳನ್ನು  ಸಿಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News