ಇಡಿ, ಸಿಬಿಐ ಮುಖ್ಯಸ್ಥರ ಅವಧಿ ವಿಸ್ತರಣೆಗೆ ಸುಗ್ರೀವಾಜ್ಞೆ ವಿರೋಧಿಸಿ ರಾಜ್ಯಸಭೆಯಲ್ಲಿ ನೋಟಿಸ್ ಮಂಡಿಸಿದ ಟಿಎಂಸಿ

Update: 2021-11-15 13:11 GMT

ಹೊಸದಿಲ್ಲಿ: ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಆವಧಿಯನ್ನು ವಿಸ್ತರಿಸಲು ಸರಕಾರಕ್ಕೆ ಅಧಿಕಾರ ನೀಡುವ  ಸುಗ್ರೀವಾಜ್ಞೆಗೆ ವಿರೋಧಿಸಿ ತೃಣಮೂಲ ಕಾಂಗ್ರೆಸ್ ಪಕ್ಷ  ಇಂದು ರಾಜ್ಯಸಭೆಯಲ್ಲಿ ಸ್ಟೆಟ್ಯುಟರಿ ರೆಸೊಲ್ಯೂಶನ್ಸ್ ನೋಟಿಸ್ ಮಂಡಿಸಿದೆ.

ಇಡಿ ಮತ್ತು ಸಿಬಿಐ ಮುಖ್ಯಸ್ಥರ ಎರಡು ವರ್ಷದ ಅವಧಿ ಮುಗಿದ ನಂತರ ಅವರ ಸೇವಾವಧಿಯನ್ನು ಒಂದು ಅಥವಾ ಸತತ ಮೂರು ವರ್ಷಗಳ ತನಕ ವಿಸ್ತರಿಸಲು ಕೇಂದ್ರಕ್ಕೆ ಅನುಮತಿಸುವ ಸುಗ್ರೀವಾಜ್ಞೆಗೆ ರವಿವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ನೀಡಿದ್ದರು. ಈ ಸುಗ್ರೀವಾಜ್ಞೆಗಳ ಮೂಲಕ ದಿಲ್ಲಿ ಪೊಲೀಸ್ ವಿಶೇಷ ಎಸ್ಟಾಬ್ಲಿಶ್ಮೆಂಟ್ ಕಾಯಿದೆಗೆ ತಿದ್ದುಪಡಿ ತರಲಾಗಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಎರಡು ವಾರಗಳು ಮಾತ್ರ ಇರುವಾಗ ಸರಕಾರ ಅವಸರದಿಂದ ಸುಗ್ರೀವಾಜ್ಞೆಯ ಹಾದಿ ಏಕೆ ಹಿಡಿದಿದೆ ಎಂದು ಟಿಎಂಸಿ ಈ ಹಿಂದೆ ಆಕ್ಷೇಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News