×
Ad

ಪೊಲೀಸ್ ಮ್ಯಾನ್ಯುಯಲ್ ಕೇವಲ ಕಾಗದದಲ್ಲಿದೆ: ಝಕಿಯಾ ಜಾಫ್ರಿ

Update: 2021-11-17 22:40 IST

ಹೊಸದಿಲ್ಲಿ,ನ.17: ಗುಜರಾತಿನಲ್ಲಿ 2002ರಲ್ಲಿ ನಡೆದಿದ್ದ ದಂಗೆಗಳನ್ನು ತಡೆಯಬಹುದಿತ್ತು,ಆದರೆ ಅಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿರಲಿಲ್ಲ ಎಂದು ಝಕಿಯಾ ಜಾಫ್ರಿ (81) ಅವರು ಬುಧವಾರ ರಾಜ್ಯದ ಆಡಳಿತ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಯಂತ್ರವನ್ನು ಗುರಿಯಾಗಿಸಿಕೊಂಡು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಗುಜರಾತ್ ದಂಗೆಗಳಲ್ಲಿ ತನ್ನ ಪತಿ,ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರನ್ನು ಕಳೆದುಕೊಂಡಿರುವ ಝಕಿಯಾ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ‘ಕ್ಲೀನ್ ಚಿಟ್’ ನೀಡಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಕೋಮು ಘಟನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇದು ಈಗಲೂ ಹಲವಾರು ಸ್ಥಳಗಳಲ್ಲಿ ಕಂಡುಬರುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದ ಝಕಿಯಾ ಪರ ಹಿರಿಯ ವಕೀಲ ಕಪಿಲ ಸಿಬಲ್ ಅವರು, ‘ಕೋಮು ಘಟನೆಗಳ ಬೆದರಿಕೆ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪೊಲೀಸ್ ಮ್ಯಾನ್ಯುಯಲ್ (ಕೈಪಿಡಿ) ಇದೆ,ಆದರೆ ಅದನ್ನೆಂದಿಗೂ ಅನುಸರಿಸಲಾಗಿಲ್ಲ. ನಾವದನ್ನು ತ್ರಿಪುರಾ,ದಿಲ್ಲಿ ಮತ್ತು ಇತರ ಹಲವಾರು ಸ್ಥಳಗಳಲ್ಲಿ ನೋಡುತ್ತಿದ್ದೇವೆ. ಮ್ಯಾನ್ಯುಯಲ್ ಕೇವಲ ಮುದ್ರಿತ ಶಬ್ದಗಳಾಗಿದ್ದು,ಕಾಗದದಲ್ಲಿ ಮಾತ್ರ ಇದೆ ’ ಎಂದರು.

ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನ.23ಕ್ಕೆ ನಿಗದಿಗೊಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News