2004 ರ ದ್ವೇಷ ಭಾಷಣ ಪ್ರಕರಣ: ಅಕ್ಬರುದ್ದೀನ್ ಉವೈಸಿಯನ್ನು ಖುಲಾಸೆಗೊಳಿಸಿದ ಹೈದರಾಬಾದ್ ನ್ಯಾಯಾಲಯ

Update: 2021-11-18 05:53 GMT
photo: twitter

ಹೈದರಾಬಾದ್: ಎಐಎಂಐಎಂ ನಾಯಕ ಹಾಗೂ  ವಿಧಾನಸಭೆಯ ಸದಸ್ಯ (ಎಂಎಲ್‌ಎ) ಅಕ್ಬರುದ್ದೀನ್ ಉವೈಸಿ ವಿರುದ್ಧ 2004 ರಲ್ಲಿ ದಾಖಲಾದ 'ದ್ವೇಷ' ಭಾಷಣ ಪ್ರಕರಣದಲ್ಲಿ ಹೈದರಾಬಾದ್‌ನ ವಿಶೇಷ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದೆ ಎಂದು thenewsminute.com ವರದಿ ಮಾಡಿದೆ.

ಸಂಸದ/ಶಾಸಕರ  ವಿಚಾರಣೆ ನಡೆಸುವ ವಿಶೇಷ ಸೆಷನ್ಸ್ ನ್ಯಾಯಾಲಯವು  ಮಂಗಳವಾರ  ಉವೈಸಿ ಅವರ ವಿರುದ್ಧದ ಅಪರಾಧಗಳು ಹಾಗೂ  ಆರೋಪಗಳಲ್ಲಿ ತಪ್ಪಿತಸ್ಥರಲ್ಲ ಎಂದು ಕಂಡು ಅವರನ್ನು ಖುಲಾಸೆಗೊಳಿಸಿದೆ.

2004ರಲ್ಲಿ ಚುನಾವಣಾ ಪ್ರಚಾರದ ವೇಳೆ ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಚಂದ್ರಾಯನಗುಟ್ಟದ ಶಾಸಕರು ಉದ್ಧಟತನದ ಭಾಷಣ ಮಾಡಿ ಪ್ರಚೋದನೆಗೆ ಯತ್ನಿಸಿದರು ಎಂದು ಆರೋಪಿಸಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಉವೈಸಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರಕಾರದ ಒಪ್ಪಿಗೆ ಪಡೆದ ನಂತರ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು. ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ನಂತರ ಸ್ವತಂತ್ರ ಸಾಕ್ಷಿ ಪ್ರಕರಣವನ್ನು ಬೆಂಬಲಿಸದ ಕಾರಣ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಉವೈಸಿಯವರನ್ನು ಖುಲಾಸೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News