ಪೂರ್ವಾಂಚಲ್ ಎಕ್ಸ್ ಪ್ರೆಸ್‍ವೇ ಉದ್ಘಾಟನೆಯದ್ದೆಂದು ಹೇಳಲಾದ ವೈರಲ್ ಚಿತ್ರ ಹಂಗೇರಿ ದೇಶದ್ದು !
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಪೂರ್ವಾಂಚಲ್ ಎಕ್ಸ್‍ಪ್ರೆಸ್‍ವೇ ಉದ್ಘಾಟಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಟ್ವಿಟ್ಟರ್‍ನಲ್ಲಿ ಬಿಜೆಪಿ ನಾಯಕರ ಸಹಿತ ಹಲವು ಶೇರ್ ಮಾಡಿದ ಚಿತ್ರವೊಂದು ವೈರಲ್ ಆಗಿತ್ತು. ಈ ಚಿತ್ರದಲ್ಲಿ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೂತನ ಎಕ್ಸ್ ಪ್ರೆಸ್‍ವೇ ಯಲ್ಲಿ ನಡೆಯುತ್ತಿರುವುದು ಹಾಗೂ ಹಿನ್ನೆಲೆಯಲ್ಲಿ ಹಲವಾರು ಯುದ್ಧ ವಿಮಾನಗಳು ಭಾರತದ ತ್ರಿವರ್ಣದ ಬಣ್ಣಗಳ ಹೊಗೆಯನ್ನು ಹೊರಸೂಸುತ್ತಿರುವುದು ಕಾಣಿಸುತ್ತದೆ. ಈ ಕುರಿತು theprint.in ಸತ್ಯಶೋಧನಾ ವರದಿ ಪ್ರಕಟಿಸಿದ್ದು, ಚಿತ್ರವು ಹಂಗೇರಿ ದೇಶದ್ದಾಗಿದೆ ಎಂದು ವರದಿ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೆ ಸತ್ಯಕುಮಾರ್ ಈ ಚಿತ್ರವನ್ನು ಶೇರ್ ಮಾಡಿ ಉತ್ತರ ಪ್ರದೇಶ್ -ಎಕ್ಸ್ ಪ್ರೆಸ್ ಪ್ರದೇಶ್ ಎಂದು ಬರೆದಿದ್ದಾರೆ. ಏಕಲ್‍ಧಮ್ ಆಶ್ರಮದ ಮಹಂತ್ ಯೋಗಿ ದೇವನಾಥ್ ಕೂಡ ಈ ಚಿತ್ರ ಶೇರ್ ಮಾಡಿ "ಥ್ಯಾಂಕ್ಯೂ ಮೋದೀ ಜಿ ಮತ್ತು ಯೋಗೀ ಜಿ" ಎಂದು ಬರೆದಿದ್ದಾರೆ.
ಆದರೆ ಈ ಚಿತ್ರಕ್ಕೂ ಎಕ್ಸ್‍ಪ್ರೆಸ್ ವೇ ಉದ್ಘಾಟನೆಗೂ ಸಂಬಂಧವಿಲ್ಲವೆಂಬುದು ವಾಸ್ತವ. ಈ ಚಿತ್ರದ ಹಿನ್ನೆಲೆಯಲ್ಲಿರುವ ಯುದ್ಧವಿಮಾನಗಳು ಹಂಗೇರಿಯಲ್ಲಿ ಆಗಸ್ಟ್ 2008 ರಲ್ಲಿ ನಡೆದ ಕೆಕ್ಸೆಮೆಟ್ ಏರ್ ಶೋ ದ್ದಾಗಿತ್ತು. ಹಂಗೆರಿಯ ಕೆಕ್ಸೆಮೆಟ್‍ನಲ್ಲಿ ಇಟೆಲಿ ವಾಯು ದಳದ ಖ್ಯಾತ ಏರೋಬಾಟಿಕ್ಸ್ ತಂಡ ಫ್ರೆಕ್ಕೆ ಟ್ರೈಕೊಲೊರಿ ಈ ವೈಮಾನಿಕ ಶೋ ಪ್ರದರ್ಶಿಸಿತ್ತು. ಇದೀಗ ವೈರಲ್ ಆಗಿರುವ ಚಿತ್ರವನ್ನು ಶಟರ್ ಸ್ಟಾಕ್ ವೆಬ್‍ಸೈಟ್‍ನಿಂದ ನಕಲಿಸಲಾಗಿದೆ ಎಂದು ತಿಳಿದು ಬಂದಿದೆ.
उत्तर प्रदेश - #एक्सप्रेस_प्रदेश pic.twitter.com/aUMH76cBwK
— Y. Satya Kumar (@satyakumar_y) November 16, 2021
THANK YOU MODI JI AND YOGI JI #एक्सप्रेस_प्रदेश pic.twitter.com/XgGhK0bfVX
— Yogi Devnath (@YogiDevnath2) November 16, 2021
A picture is worth thousand words. There are a thousand things you can infer from this picture. If you follow India’s politics regularly, this will give you a good sense of where India is headed. pic.twitter.com/se6BQYUgtG
— Sunanda Vashisht (@sunandavashisht) November 16, 2021
THANK YOU MODI JI AND YOGI JI #एक्सप्रेस_प्रदेश pic.twitter.com/cquxC8fKI0
— Sudhakar Singh kushwaha (@BjpSudhakar1988) November 16, 2021