×
Ad

ಸಂಸತ್ತಿನಲ್ಲಿ ಕೃಷಿ ಕಾನೂನು ರದ್ದಾದ ನಂತರವೇ ರೈತರ ಆಂದೋಲನ ಕೊನೆಯಾಗಲಿದೆ: ರಾಕೇಶ್ ಟಿಕಾಯತ್

Update: 2021-11-19 10:53 IST

ಹೊಸದಿಲ್ಲಿ:  ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಆರಂಭವಷ್ಟೇ ಎಂದು ಹೇಳಿದ ಭಾರತೀಯ  ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಸಂಸತ್ತಿನಲ್ಲಿ ಈ ನಿರ್ಧಾರವನ್ನು ಅಂಗೀಕರಿಸಿದ ನಂತರವೇ ಪ್ರತಿಭಟನಾನಿತರ ರೈತರು ಮನೆಗೆ ಮರಳುತ್ತಾರೆ ಎಂದು ಹೇಳಿದ್ದಾರೆ.

ನಾವು ತಕ್ಷಣವೇ ಆಂದೋಲನ ನಿಲ್ಲಿಸುವುದಿಲ್ಲ. ಕೃಷಿ ಕಾನೂನುಗಳನ್ನು ಸಂಸತ್ತಿನಲ್ಲಿ ವಾಪಸ್ ಪಡೆಯುವವರೆಗೆ ನಾವು ಇಲ್ಲೇ ಕಾಯುತ್ತೇವೆ. ಸರಕಾರವು ಕನಿಷ್ಟ ಬೆಂಬಲ ಬೆಲೆಯ ಜೊತೆಗೆ ರೈತರ ಇತರ ವಿಚಾರಗಳ ಕುರಿತು ಮಾತುಕತೆ ನಡೆಸಬೇಕು ಎಂದು ಟಿಕಾಯತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News