ಪರಿಣಾಮಕಾರಿ ಪ್ರತಿಭಟನೆ ಆಯೋಜಿಸಲು ಸಿಎಎ ವಿರೋಧಿ ಪ್ರತಿಭಟನೆಯು ರೈತರಿಗೆ ದಾರಿ ತೋರಿಸಿತು: ಮೌಲಾನಾ ಅರ್ಶದ್ ಮದನಿ
ಹೊಸದಿಲ್ಲಿ: ಕೇಂದ್ರ ಸರಕಾರವು ಜಾರಿಗೆ ತಂದಿದ್ದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ಒಂದು ವರ್ಷಗಳ ಕಾಲ ರೈತರು ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಈ ಮೂರು ಕೃಷಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯುವುದಾಗಿ ಕೇಂದ್ರ ಸರಕಾರವು ನಿರ್ಧರಿಸಿದ್ದನ್ನು ಜಮೀಯತ್ ಉಲಮಾ ಎ ಹಿಂದ್ ಅಧ್ಯಕ್ಷ ಅರ್ಶದ್ ಮದನಿ ಸ್ವಾಗತಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿದ ಅವರು "ತಮ್ಮ ಹಕ್ಕುಗಳನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುದಕ್ಕೆ ಚಳುವಳಿ ಉದಾಹರಣೆಯಾಗಿದೆ" ಎಂದು ಬರೆದಿದ್ದಾರೆ.
ದೇಶಾದ್ಯಂತ ರೈತರು ಸಿಎಎ ವಿರೋಧಿ ಪ್ರತಿಭಟನೆಗಳಿಂದ ಪ್ರೇರಿತರಾಗಿ ಕೃಷಿ ಕಾನೂನುಗಳ ವಿರುದ್ಧ ಇಂತಹ ಪ್ರಬಲ ಆಂದೋಲನಕ್ಕೆ ಪ್ರೇರೇಪಣೆ ಪಡೆದಿದ್ದಾರೆ ಎಂದು ಅವರು ಹೇಳಿದರು. ಸರ್ಕಾರ ಸಿಎಎಯನ್ನು ಕೂಡ ರದ್ದುಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
“ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದನ್ನು ನಾವು ಸ್ವಾಗತಿಸುತ್ತೇವೆ, ಸರ್ಕಾರವು ಸಿಎಎಯನ್ನು ರದ್ದುಗೊಳಿಸಬೇಕು. ಇಂತಹ ಪ್ರಬಲ ಪ್ರತಿಭಟನೆಯನ್ನು ನಡೆಸಲು ಸಿಎಎ ವಿರೋಧಿ ಪ್ರತಿಭಟನೆಗಳು ರೈತರಿಗೆ ಮಾರ್ಗದರ್ಶನ ನೀಡಿವೆ" ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.
हम कृषि कानूनों की वापसी का स्वागत करते हैं,सरकार #CAA को भी वापस ले,किसानों को इस तरह के शक्तिशाली आंदोलन चलाने का रास्ता सीएए के खिलाफ चलाए गये आंदोलन से मिला,इस निर्णय ने साबित कर दिया कि लोकतंत्र और जनता की ताक़त सर्वप्रिय है और लोकतंत्र में सभी को अपनी बात रखने का अधिकार है।
— Arshad Madani (@ArshadMadani007) November 19, 2021