ಮೂರನೇ ಟ್ವೆಂಟಿ-20: ನ್ಯೂಝಿಲ್ಯಾಂಡ್ ಗೆಲುವಿಗೆ 185 ರನ್ ಗುರಿ

Update: 2021-11-21 15:35 GMT
Photo: BCCI

ಕೋಲ್ಕತಾ: ನಾಯಕ ರೋಹಿತ್ ಶರ್ಮಾ ಗಳಿಸಿದ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ರವಿವಾರ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಗೆಲುವಿಗೆ 185 ರನ್ ಗುರಿ ನೀಡಿದೆ.

ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

ಇಶಾನ್ ಕಿಶನ್(29, 21 ಎಸೆತ, 6 ಬೌಂಡರಿ)ಅವರೊಂದಿಗೆ ಇನಿಂಗ್ಸ್ ಆರಂಭಿಕ ಆಟಗಾರ ರೋಹಿತ್(56, 31 ಎಸೆತ, 5 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್ ಗೆ 69 ರನ್ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಕಿಶನ್ ವಿಕೆಟ್ ಪಡೆದ ಸ್ಪಿನ್ ಬೌಲರ್ ಸ್ಯಾಂಟ್ನರ್(3-27) ಈ ಜೋಡಿಯನ್ನು ಬೇರ್ಪಡಿಸಿದರು.

ಶ್ರೇಯಸ್ ಅಯ್ಯರ್(25,20 ಎಸೆತ, 2 ಬೌಂಡರಿ)ಹಾಗೂ ವೆಂಕಟೇಶ್ ಅಯ್ಯರ್(20, 15 ಎಸೆತ, 1 ಬೌಂಡರಿ, 1 ಸಿಕ್ಸರ್) ,ಹರ್ಷಲ್ ಪಟೇಲ್(18, 11 ಎಸೆತ) ಹಾಗೂ ಹಾಗೂ ದೀಪಕ್ ಚಹಾರ್ (ಔಟಾಗದೆ 21, 8 ಎಸೆತ, 2 ಬೌಂಡರಿ, 1 ಸಿಕ್ಸರ್ )ಎರಡಂಕೆಯ ಸ್ಕೋರ್ ಗಳಿಸಿದರು.

ಅಗ್ರ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್(0) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ (4) ದಯನೀಯ ವೈಫಲ್ಯ ಕಂಡರು.

ಕಿವೀಸ್ ಪರವಾಗಿ ಸ್ಪಿನ್ನರ್ ಸ್ಯಾಂಟ್ನರ್ (3-27) ಯಶಸ್ವಿ ಬೌಲರ್ ಎನಿಸಿಕೊಂಡರು. ಐಶ್ ಸೋಧಿ(1-31), ಟ್ರೆಂಟ್ ಬೌಲ್ಟ್(1-31), ಫರ್ಗುಸನ್(1-45) ಹಾಗೂ ಮಿಲ್ನೆ(1-47) ತಲಾ ಒಂದು ವಿಕೆಟ್ ನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News