×
Ad

ಜೆಡಿಯು ಮಾಜಿ ಸಂಸದ ಪವನ್ ವರ್ಮಾ ಟಿಎಂಸಿ ಸೇರ್ಪಡೆ

Update: 2021-11-23 17:04 IST

ಹೊಸದಿಲ್ಲಿ: ಜನತಾ ದಳದ (ಸಂಯುಕ್ತ) ಮಾಜಿ ನಾಯಕ ಪವನ್ ವರ್ಮಾ ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಸೇರ್ಪಡೆಗೊಂಡಿದ್ದಾರೆ.

 ಮಾಜಿ ರಾಜ್ಯಸಭಾ ಸಂಸದ ವರ್ಮಾ (68 ವರ್ಷ) ಅವರು ರಾಜತಾಂತ್ರಿಕ-ರಾಜಕಾರಣಿಯಾಗಿದ್ದು, ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ  ಕ್ಯಾಬಿನೆಟ್ ಸಚಿವ ಸ್ಥಾನದೊಂದಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಹಾಗೂ  ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮೂರು ದಿನಗಳ ದಿಲ್ಲಿ ಭೇಟಿಯ ಸಂದರ್ಭದಲ್ಲಿ ವರ್ಮಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ವೀಡಿಯೊವನ್ನು ಮಂಗಳವಾರ ಟಿಎಂಸಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.

ಟಿಎಂಸಿಗೆ ಸೇರ್ಪಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ವರ್ಮಾ, "2024 ರ ಲೋಕಸಭೆ ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಅವರನ್ನು ದಿಲ್ಲಿಯಲ್ಲಿ ನೋಡಲು ಬಯಸುತ್ತೇನೆ'' ಎಂದು ಹೇಳಿದರು.

"ಟಿಎಂಸಿ ದೇಶದಲ್ಲಿ ಅಸಾಧಾರಣ ಶಕ್ತಿಯಾಗುತ್ತಿದೆ ಮತ್ತು ಪ್ರಮುಖ ಪ್ರತಿಪಕ್ಷವಾಗುವ ಹಾದಿಯಲ್ಲಿದೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ" ಎಂದು ವರ್ಮಾ ಮಂಗಳವಾರ 'ಇಂಡಿಯಾ ಟುಡೇ'ಗೆ ತಿಳಿಸಿದರು.

ಪ್ರಶಾಂತ್ ಕಿಶೋರ್ ಅವರು ಟಿಎಂಸಿ ಸೇರಲು ಮನವೊಲಿಸಿದ್ದಾರೆಯೇ ಎಂಬ ಪ್ರಶ್ನೆಗೆ' "ಖಂಡಿತವಾಗಿಯೂ ನಾವು ಒಳ್ಳೆಯ ಸ್ನೇಹಿತರು. ನಾನು ಅವರೊಂದಿಗೆ ಸಮಾಲೋಚಿಸುತ್ತೇನೆ. ಆದರೆ ನಾನು ನನ್ನ ಈ ನಿರ್ಧಾರವನ್ನು ಅವರ ಮೇಲೆ ಹಾಕುವುದಿಲ್ಲ" ಎಂದು ವರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News