ಶ್ರೀಲಂಕಾ: ದೋಣಿ ಮುಳುಗಿ 6 ಮಂದಿ ಮೃತ್ಯು 10 ಮಂದಿ ನಾಪತ್ತೆ

Update: 2021-11-23 16:06 GMT
ಸಾಂದರ್ಭಿಕ ಚಿತ್ರ:twitter

ಕೊಲಂಬೋ, ನ.23: ಪೂರ್ವ ಶ್ರೀಲಂಕಾದಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದ ದೋಣಿಯೊಂದು ಕೆರೆಯಲ್ಲಿ ಮುಳುಗಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಿನ್ನಿಯಾ ಎಂಬ ನಗರದಲ್ಲಿ ದೋಣಿ ದುರಂತ ಸಂಭವಿಸಿದ್ದು, ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನು ಆಚೆಯ ದಡಕ್ಕೆ ಕರೆದೊಯ್ಯುತ್ತಿದ್ದ ದೋಣಿ ಕೆರೆಯಲ್ಲಿ ಮುಳುಗಿದೆ. 4 ಮಕ್ಕಳ ಸಹಿತ ಕನಿಷ್ಟ 6 ಮಂದಿ ಮೃತರಾಗಿದ್ದಾರೆ. ದುರಂತಕ್ಕೆ ಕಾರಣ ಇದುವರೆಗೆ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ವಕ್ತಾರ ನಿಹಾಲ್ ಥಲ್ದುವಾ ಹೇಳಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ನೀರಿನಲ್ಲಿ ಮುಳುಗುತ್ತಿದ್ದ 20 ಮಂದಿಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಲ್ಲಿ 10ಕ್ಕೂ ಹೆಚ್ಚಿನವರು ಶಾಲಾ ಮಕ್ಕಳು ಎಂದು ವರದಿಯಾಗಿದೆ. ಮುಳುಗು ತಜ್ಞರ ಸಹಿತ ನೌಕಾಪಡೆಯ 8 ತಂಡಗಳು ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ತೊಡಗಿತ್ತು. ಆದರೆ ಈಗ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News