ಮುಕೇಶ್ ಅಂಬಾನಿ ಹಿಂದಿಕ್ಕಿ ಏಶ್ಯದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಗೌತಮ್ ಅದಾನಿ

Update: 2021-11-24 10:39 GMT

ಹೊಸದಿಲ್ಲಿ: ಗೌತಮ್ ಅದಾನಿ  ಅವರು ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ET NOW ವರದಿ ಮಾಡಿದೆ.

ಬ್ಲೂಮ್‌ಬರ್ಗ್‌ನೊಂದಿಗೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಇತ್ತೀಚೆಗೆ O2C ಒಪ್ಪಂದವನ್ನು ರದ್ದುಗೊಳಿಸಿದ ನಂತರ ಒತ್ತಡದಲ್ಲಿಯೇ ಉಳಿದಿವೆ ಹಾಗೂ  1.07 ಶೇಕಡಾ ಕಡಿಮೆಯಾಗಿ 2,360.70 ರೂ. ತಲುಪಿದೆ.

ಮತ್ತೊಂದೆಡೆ, ಅದಾನಿ ಸಮೂಹದ ಷೇರುಗಳು ಹೆಚ್ಚಿನ ವಹಿವಾಟು ನಡೆಸುತ್ತಿವೆ. ಅದಾನಿ ಎಂಟರ್‌ಪ್ರೈಸಸ್ ಶೇ.2.94ರಷ್ಟು ಏರಿಕೆ ಕಂಡು 1757.70 ರೂ. ಅದಾನಿ ಪೋರ್ಟ್ಸ್ ಶೇ.4.87ರಷ್ಟು ಏರಿಕೆ ಕಂಡು 764.75 ರೂ. ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 0.50 ರಷ್ಟು ಏರಿಕೆಯಾಗಿ 1,950.75 ಕ್ಕೆ ತಲುಪಿದೆ ಹಾಗೂ  ಅದಾನಿ ಪವರ್ ಷೇರುಗಳು ಸಹ ಶೇಕಡಾ 0.33 ರಷ್ಟು ಏರಿಕೆಯಾಗಿ 106.25 ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News