ಎದೆನೋವು: ಆಸ್ಪತ್ರೆಗೆ ದಾಖಲಾದ ಅಣ್ಣಾ ಹಝಾರೆ
Update: 2021-11-25 18:52 IST
ಮುಂಬೈ: ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಅವರನ್ನು ಗುರುವಾರ ಎದೆನೋವು ಕಾಣಿಸಿಕೊಂಡ ನಂತರ ಪುಣೆಯ ರೂಬಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು thequint.com ವರದಿ ಮಾಡಿದೆ.
ಆಸ್ಪತ್ರೆಗೆ ದಾಖಲಾದ ಕ್ಷಣದಿಂದ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಹಾಗೂ ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರೂಬಿ ಹಾಲ್ ಕ್ಲಿನಿಕ್‌ನ ವೈದ್ಯಕೀಯ ಅಧೀಕ್ಷಕ ಡಾ. ಅವಧೂತ್ ಬೋಡಮ್‌ವಾಡ್ ಹೇಳಿದ್ದಾರೆಂದು ANI ವರದಿ ಮಾಡಿದೆ.