ಆಗ್ರಾ: ಮೊಘಲ್ ರಸ್ತೆಯನ್ನು 'ಮಹಾರಾಜ ಅಗ್ರಸೇನ್ ಮಾರ್ಗ್' ಎಂದು ಮರುನಾಮಕರಣ

Update: 2021-11-26 05:25 GMT
 Photo Credit: ANI

ಲಕ್ನೊ: ಆಗ್ರಾದ ಮೊಘಲ್ ರಸ್ತೆಯನ್ನು ಗುರುವಾರ ಮಹಾರಾಜ ಅಗ್ರಸೇನ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು ಎಂದು ANI ವರದಿ ಮಾಡಿದೆ.

"ಮುಂಬರುವ ಪೀಳಿಗೆಯು ಪ್ರಮುಖ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಬೇಕು" ಎಂದು ಆಗ್ರಾ ಮೇಯರ್ ನವೀನ್ ಜೈನ್ ರಸ್ತೆಯ ಮರುನಾಮಕರಣದ ನಿರ್ಧಾರದ ಕುರಿತು ಹೇಳಿದರು.

ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ, ಕಮಲಾ ನಗರ, ಗಾಂಧಿನಗರ, ವಿಜಯನಗರ ಕಾಲೋನಿ, ನ್ಯೂ ಆಗ್ರಾ ವಲಯ, ಬಲ್ಕೇಶ್ವರ ಪ್ರದೇಶಗಳಲ್ಲಿ ಅವರಿಗೆ ಸಾವಿರಾರು ಅನುಯಾಯಿಗಳಿದ್ದಾರೆ, ಅವರು ಮರುನಾಮಕರಣದ ಸಂದರ್ಭ ಇಲ್ಲಿಗೆ ಬಂದಿದ್ದರು. ಅವರಿಗೆ ಗೌರವ ಸಲ್ಲಿಸಿದರು ಎಂದರು.

ಮಹಾರಾಜ ಅಗ್ರಸೇನ್ ಅಗ್ರೋಹದ ಪ್ರಸಿದ್ಧ ರಾಜನಾಗಿದ್ದನು, ಇದು ವ್ಯಾಪಾರಿಗಳ ನಗರವಾಗಿತ್ತು.

" ಈ ಹಿಂದೆ, ಸುಲ್ತಾನ್ ಗಂಜ್ ಪುಲಿಯಾಕ್ಕೆ  ದಿವಂಗತ ಸತ್ಯ ಪ್ರಕಾಶ್ ವಿಕಲ್ ಅವರ ಹೆಸರನ್ನು ಇಡಲಾಗಿತ್ತು. ಅಲ್ಲದೆ, ನಾವು ಆಗ್ರಾದ ಘಾಟಿಯಾ ಆಝಮ್ ಖಾನ್ ರಸ್ತೆಗೆ ದಿವಂಗತ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಹೆಸರನ್ನು ಇಟ್ಟಿದ್ದೇವೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News