ರೈತರ ಚಳವಳಿಗೆ ಒಂದು ವರ್ಷ ಪೂರ್ಣ: ವಿವಿಧ ರಾಜ್ಯಗಳಲ್ಲಿ ರೈತರಿಂದ ಪ್ರತಿಭಟನೆ

Update: 2021-11-26 08:12 GMT

ಹೊಸದಿಲ್ಲಿ: ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಶುಕ್ರವಾರ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದೆ.

ಎಸ್‌ಕೆಎಂ ಅಧಿಕೃತ ಹೇಳಿಕೆಯ ಪ್ರಕಾರ, ಸಾವಿರಾರು ರೈತರು ದಿಲ್ಲಿಯ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳನ್ನು ತಲುಪುತ್ತಾರೆ. ಪಂಜಾಬ್‌ನ ಅಮೃತಸರದಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ರೈತರ ಗುಂಪೊಂದು ಶ್ರದ್ಧಾಂಜಲಿ ಸಲ್ಲಿಸಿತು.

ಕರ್ನಾಟಕದಲ್ಲಿ ಶುಕ್ರವಾರದಂದು ಪ್ರಮುಖ ಹೆದ್ದಾರಿಗಳಲ್ಲಿ ರೈತರು ಬೀದಿಗಿಳಿಯಲು ನಿರ್ಧರಿಸಿದ್ದಾರೆ ಎಂದು ಎಸ್‌ಕೆಎಂ ಹೇಳಿದೆ. "ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಸರಿಸುಮಾರು 25 ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಯೋಜಿಸಲಾಗಿದೆ'' ಎಂದು ಅದು ಹೇಳಿದೆ.

ತಮಿಳುನಾಡಿನಲ್ಲಿ ಎಸ್‌ಕೆಎಂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಟ್ರೇಡ್ ಯೂನಿಯನ್‌ಗಳೊಂದಿಗೆ ಜಂಟಿಯಾಗಿ ರ್ಯಾಲಿಗಳನ್ನು ಯೋಜಿಸಿದೆ. "ಚೆನ್ನೈನಲ್ಲಿಯೂ ಪ್ರತಿಭಟನೆ ಪ್ರದರ್ಶನ ಮತ್ತು ಸಭೆ ನಡೆಯಲಿದೆ. ರಾಯಪುರ ಮತ್ತು ರಾಂಚಿಯಂತಹ ಹಲವಾರು ರಾಜ್ಯಗಳ ರಾಜಧಾನಿಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿಗಳನ್ನು ಯೋಜಿಸಲಾಗುತ್ತಿದೆ" ಎಂದು ಎಸ್ ಕೆ ಎಂ ಹೇಳಿದೆ.

ಪ.ಬಂಗಾಳದ ಕೋಲ್ಕತಾದಲ್ಲಿ ಇಂದು ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನವೆಂಬರ್ 26 ರಂದು ಪ್ರತಿಭಟನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಾಟ್ನಾದಲ್ಲಿ ರೈತ ಸಂಘಗಳು ಮತ್ತು ಕಾರ್ಮಿಕ ಸಂಘಗಳು ಜಿಲ್ಲಾಧಿಕಾರಿ ಕಚೇರಿಯತ್ತ ಜಂಟಿ ಮೆರವಣಿಗೆ ನಡೆಸಿ ಜ್ಞಾಪಕ ಪತ್ರವನ್ನು ಸಲ್ಲಿಸಲಿವೆ. ಏತನ್ಮಧ್ಯೆ, ಸಾವಿರಾರು ರೈತರು ಟ್ರ್ಯಾಕ್ಟರ್‌ಗಳು ಮತ್ತು ಪಡಿತರ ಮತ್ತು ಇತರ ಸರಬರಾಜುಗಳೊಂದಿಗೆ ದಿಲ್ಲಿಯ ಸುತ್ತಮುತ್ತಲಿನ ಮೋರ್ಚಾ ಸೈಟ್‌ಗಳಿಗೆ ಆಗಮಿಸುತ್ತಿದ್ದಾರೆ”ಎಂದು ಎಸ್‌ಕೆಎಂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News