×
Ad

ಉಧಮ್‌ಪುರ-ದುರ್ಗ ಎಕ್ಸ್‌ಪ್ರೆಸ್‌ನ ಎರಡು ಬೋಗಿಗೆ ಹೊತ್ತಿಕೊಂಡ ಬೆಂಕಿ

Update: 2021-11-26 17:46 IST
photo:screenshot twitter ANI

ಮೊರೆನಾ(ಮಧ್ಯ ಪ್ರದೇಶ): ಉಧಮ್‌ಪುರ-ದುರ್ಗ ಎಕ್ಸ್‌ಪ್ರೆಸ್‌ನ ಎ1 ಹಾಗೂ  ಎ2 ಕೋಚ್‌ಗಳಲ್ಲಿ ಹೇತಾಂಪುರ ರೈಲು ನಿಲ್ದಾಣದಿಂದ ಹೊರಬಂದ ನಂತರ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ಏನೆಂದು ಗೊತ್ತಾಗಿಲ್ಲ ಎಂದು ANI ವರದಿ ಮಾಡಿದೆ.

ಘಟನೆಯಲ್ಲಿ  ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ  ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ಡಾ.ಶಿವಂ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News