ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ದೇಶದ ಗರಿಷ್ಠ ಬಡತನವಿರುವ ರಾಜ್ಯಗಳು: ನೀತಿ ಆಯೋಗ

Update: 2021-11-26 13:04 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ನೀತಿ ಆಯೋಗದ ಬಹುಆಯಾಮದ ಬಡತನ ಸೂಚ್ಯಂಕ (ಮಲ್ಟಿಡೈಮೆನ್ಶನಲ್ ಪವರ್ಟಿ ಇಂಡೆಕ್ಸ್) ಅನ್ವಯ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ದೇಶದ ಅತ್ಯಂತ ಬಡ ರಾಜ್ಯಗಳಾಗಿವೆ.

ಈ ಸೂಚ್ಯಂಕದ ಪ್ರಕಾರ ಬಿಹಾರದ ಶೇ 51.91ರಷ್ಟು ಜನಸಂಖ್ಯೆ ಬಡತನದಿಂದ ನರಳುತ್ತಿದ್ದರೆ, ಜಾರ್ಖಂಡ್‍ನ ಶೇ 42.16 ಜನರು ಹಾಗೂ ಉತ್ತರ ಪ್ರದೇಶದ ಶೇ 37.79ರಷ್ಟು ಬಂದಿ ಬಡವರಾಗಿದ್ದಾರೆ. ಉಳಿದಂತೆ ಮಧ್ಯಪ್ರದೇಶದಲ್ಲಿ ಶೇ 36.65ರಷ್ಟು ಮಂದಿ, ಮೇಘಾಲಯದ ಶೇ 32.67 ಮಂದಿ ಬಡತನದಿಂದ ಬಳಲುತ್ತಿದ್ದಾರೆ ಎಂದು ಈ ಸೂಚ್ಯಂಕ ತಿಳಿಸಿದೆ.

ಬಡತನ ಸೂಚ್ಯಂಕದಲ್ಲಿ ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ (ಶೇ 0.71), ಗೋವಾ (ಶೇ 3.76), ಸಿಕ್ಕಿಂ (ಶೇ 3.82), ತಮಿಳುನಾಡು (ಶೇ 4.89) ಹಾಗೂ ಪಂಜಾಬ್ (ಶೇ 5.59) ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News