ವ್ಯವಸ್ಥಿತ ಶಾಲಾ ಕಟ್ಟಡ ಬೇಕು

Update: 2021-11-26 18:18 GMT

ಮಾನ್ಯರೇ,
ಇಂದಿನ ಮಕ್ಕಳು ಮುಂದಿನ ಸತ್ಪ್ರಜೆಗಳು ಎಂಬ ಮಾತು ನಿಜವಾಗಬೇಕಾದರೆ ದೇಶದ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರಕಬೇಕು. ಆದರೆ ಶಿಕ್ಷಣ ಒದಗಿಸುವ ಶಿಕ್ಷಣ ಸಂಸ್ಥೆಗಳೇ ದುರವಸ್ಥೆಯಲ್ಲಿದ್ದರೆ?

ಇತ್ತೀಚೆಗೆ ಮೂಡುಬಿದಿರೆಯ ಅಳಿಯೂರು ಶಾಲೆಯ ದುರವಸ್ಥೆಯ ಕುರಿತು ಮಾಧ್ಯಮಗಳಲ್ಲಿ ವರದಿಯಾಯಿತು. ಎಲ್ಲೆಡೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಳಿಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 325 ವಿದ್ಯಾರ್ಥಿಗಳಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಕಲಿಕಾ ಸೌಕರ್ಯಕ್ಕಾಗಿ ಶೀಟ್ ಹಾಕಿದ ಕೊಠಡಿಗಳಲ್ಲದೆ ಇನ್ನಾವ ಕೊಠಡಿಯೂ ಇಲ್ಲ. ಸುಡುವ ಬೇಸಿಗೆಯ ಸಮಯದಲ್ಲಿ ಮತ್ತು ಮಳೆಗಾಲದಲ್ಲಿ ಗಾಳಿಯ ರಭಸಕ್ಕೆ ಮೇಲಿನ ಶೀಟ್‌ಗಳು ಹಾರಿದರೂ ವಿದ್ಯಾರ್ಥಿಗಳ ಕಲಿಕಾ ಸ್ಥಾನವು ಬದಲಾಗದು. ಸುರಕ್ಷಿತ ಮೇಲ್ಛಾವಣಿ, ಫ್ಯಾನ್, ಎ.ಸಿ.ಗಳು ಅಳವಡಿಸಿದ ಕೊಠಡಿಗಳಲ್ಲಿ ಕೂತ ಶಿಕ್ಷಣ ಸಚಿವರು ಈ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕುರಿತು ಇನ್ನಾದರೂ ಯೋಚಿಸಿ, ವ್ಯವಸ್ಥಿತವಾದ ಕಟ್ಟಡಗಳ ಕಾಮಗಾರಿಯನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳ ಸಾಕ್ಷರತೆಯ ಭವಿಷ್ಯಕ್ಕೆ ನೆರವಾಗಬೇಕಾಗಿದೆ.
 

Writer - -ಅಫ್ನಾಝ್ ಬೇಂಗಿಲ

contributor

Editor - -ಅಫ್ನಾಝ್ ಬೇಂಗಿಲ

contributor

Similar News