ಕೋವಿಡ್-19 ಭೀತಿ ಹಿನ್ನೆಲೆ: ಮಹಿಳಾ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯ ರದ್ದುಪಡಿಸಿದ ಐಸಿಸಿ

Update: 2021-11-27 13:11 GMT

ಹೊಸದಿಲ್ಲಿ: ಝಿಂಬಾಬ್ವೆಯಲ್ಲಿ ನಡೆಯಬೇಕಾಗಿದ್ದ ಮಹಿಳಾ ಕ್ರಿಕೆಟ್ ವಿಶ್ವಕಪ್ 2021 ಕ್ವಾಲಿಫೈಯರ್ ಅನ್ನು ಐಸಿಸಿ ರದ್ದುಪಡಿಸಿದೆ. ಈ ಕ್ವಾಲಿಫೈಯರ್  ಡಿಸೆಂಬರ್ 5 ರವರೆಗೆ ನಡೆಯಬೇಕಿತ್ತು.

ಅಧಿಕೃತ ಹೇಳಿಕೆಯ ಪ್ರಕಾರ ಕೋವಿಡ್-19 ನ ಭೀತಿಯು ಈ ನಿರ್ಧಾರಕ್ಕೆ ಕಾರಣವಾಗಿದೆ.

ಮುಂದಿನ ವರ್ಷ ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್‌ಗೆ ಅಂತಿಮ ಮೂರು ಸ್ಥಾನಗಳನ್ನು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ನ  ಉಳಿದ ಎರಡು ಸ್ಥಾನಗಳನ್ನು ಈ ಪಂದ್ಯಾವಳಿಯು ನಿರ್ಧರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News