NDTV ಗೆ ಪತ್ರಿಕೋದ್ಯಮ ಪ್ರಶಸ್ತಿ

Update: 2021-11-27 13:03 GMT
Photo: ndtv.com

ಹೊಸದಿಲ್ಲಿ: NDTV ಯ ಶ್ರೀನಿವಾಸನ್ ಜೈನ್ ಹಾಗೂ  ಮರಿಯಮ್ ಅಲವಿ ಅವರು ಇಂಟರ್ ನ್ಯಾಶನಲ್ ಪ್ರೆಸ್ ಇನ್ಸ್ಟಿಟ್ಯೂಟ್ (ಐಪಿಐ)ನ ಭಾರತ ಪತ್ರಿಕೋದ್ಯಮದ ಉತ್ಕೃಷ್ಟ ಸಾಧನಾ ಪ್ರಶಸ್ತಿ (ಇಂಡಿಯಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಅವಾರ್ಡ್)-2021ಗೆ ಭಾಜನರಾಗಿದ್ದಾರೆ. 

NDTV ಶೋ 'ರಿಯಾಲಿಟಿ ಚೆಕ್' ನಡೆಸಿದ ತನಿಖಾ ವರದಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಕಾನೂನುಬಾಹಿರವಾಗಿ ಅಂತರ್ ಧರ್ಮೀಯ ದಂಪತಿಗಳ ವಿರುದ್ಧ 'ಲವ್ ಜಿಹಾದ್' ಪ್ರಕರಣಗಳನ್ನು ದಾಖಲಿಸಿರುವುದನ್ನು ಬಹಿರಂಗಪಡಿಸಿರುವುದನ್ನು ಗುರುತಿಸಿ  ಈ ಪ್ರಶಸ್ತಿ ನೀಡಲಾಗಿದೆ. 
ಪ್ರಶಸ್ತಿಯು 1 ಲಕ್ಷ ರೂ., ಟ್ರೋಫಿ ಹಾಗೂ  ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಐಪಿಐ ತೀರ್ಪುಗಾರರ ನೇತೃತ್ವವನ್ನು ಭಾರತದ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರು ಜಸ್ಟಿಸ್  ಮದನ್ ಬಿ. ಲೋಕೂರ್ ವಹಿಸಿದ್ದರು. 

ಇಂಟರ್ ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ (ಐಪಿಐ) ಪತ್ರಿಕಾ ಸ್ವಾತಂತ್ರ್ಯದ ಪ್ರಚಾರ ಹಾಗೂ  ರಕ್ಷಣೆ ಮತ್ತು ಪತ್ರಿಕೋದ್ಯಮ ಸುಧಾರಣೆಗೆ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News