ಆಫ್ರಿಕಾದ 7 ದೇಶಗಳಿಂದ ವಿಮಾನ ಸಂಚಾರ ನಿಷೇಧಿಸಿದ ಒಮಾನ್, ಯುಎಇ, ಈಜಿಪ್ಟ್

Update: 2021-11-27 17:19 GMT
ಸಾಂದರ್ಭಿಕ ಚಿತ್ರ

ದುಬೈ, ನ.27: ಕೊರೋನ ಸೋಂಕಿನ ಹೊಸ ಆತಂಕಕಾರಿ ಪ್ರಬೇಧ ಪತ್ತೆಯಾದ ಹಿನ್ನೆಲೆಯಲ್ಲಿ ಆಫ್ರಿಕಾದ 7 ದೇಶಗಳಿಂದ ನೇರ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದ ದೇಶಗಳ ಪಟ್ಟಿಗೆ  ಒಮಾನ್, ಯುಎಇ, ಮತ್ತು ಈಜಿಪ್ಟ್ ಸೇರ್ಪಡೆಗೊಂಡಿವೆ.

ನವೆಂಬರ್ 28ರಿಂದ ಅನ್ವಯಿಸುವಂತೆ ದಕ್ಷಿಣ ಆಫ್ರಿಕಾ, ಲೆಸೊಥೊ, ಬೊಟ್ಸ್ವಾನ, ಝಿಂಬಾಬ್ವೆ, ಮೊಝಾಂಬಿಕ್, ನಮೀಬಿಯಾ, ಮತ್ತು ಎಸ್ವಾಟಿನಿ ದೇಶಗಳಿಂದ ನೇರ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಬಳಸು ದಾರಿಯ ಮೂಲಕ ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ ಹಲವು ನಿರ್ಬಂಧ ಕ್ರಮಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News