ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಕೊರೋನ ಪತ್ತೆ

Update: 2021-11-29 02:05 GMT

ಮುಂಬೈ: ದಕ್ಷಿಣ ಆಫ್ರಿಕಾದಿಂದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೊಂಬಿವಿಲಿಗೆ ಆಗಮಿಸಿದ ವ್ಯಕ್ತಿಯಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಕಲ್ಯಾಣ್-ದೊಂಬಿವಿಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಆದರೆ ಈ ವ್ಯಕ್ತಿ, ವಿಶ್ವಾದ್ಯಂತ ಆತಂಕ ಮೂಡಿಸಿರುವ ಒಮಿಕ್ರಾನ್ ರೂಪಾಂತರದ ಕೊರೋನ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆಯೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಈ ವ್ಯಕ್ತಿ ಕೇಪ್‌ಟೌನ್‌ನಿಂದ ದೊಂಬಿವಿಲಿಗೆ ನ. 24ರಂದು ಆಗಮಿಸಿದ್ದರು. ಅವರನ್ನು ಕೋವಿಡ್-19 ತಪಾಸಣೆಗೆ ಗುರಿಪಡಿಸಿದಾಗ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಬಳಿಕ ಆ ವ್ಯಕ್ತಿ ಯಾರ ಸಂಪರ್ಕಕ್ಕೂ ಬಂದಿಲ್ಲ ಎಂದು ಕೆಡಿಎಂಸಿ ವೈದ್ಯಕೀಯ ಅಧಿಕಾರಿ ಡಾ.ಪ್ರತಿಭಾ ಪಾನಪಾಟೀಲ್ ಹೇಳಿದ್ದಾರೆ. ಈ ರೋಗಿಯನ್ನು ಕೆಡಿಎಂಸಿಯ ಆರ್ಟ್‌ ಗ್ಯಾಲರಿ ಐಸೋಲೇಶನ್ ಕೇಂದ್ರಕ್ಕೆ ದಾಖಲಿಸಲಾಗಿದೆ. ಕೆಡಿಎಂಸಿ ಆರೋಗ್ಯ ವಿಭಾಗ ಜಾಗೃತವಾಗಿದ್ದು, ಹೊಸ ಪ್ರಬೇಧವನ್ನು ನಿಭಾಯಿಸಲು ನಾವು ಸಜ್ಜಾಗಿದ್ದೇವೆ ಎಂದು ಡಾ.ಪಾನಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News