ಹಿರಿಯ ಪತ್ರಕರ್ತ ವಿನೋದ್ ದುವಾ ಆರೋಗ್ಯ ಸ್ಥಿತಿ ಗಂಭೀರ

Update: 2021-11-29 13:21 GMT
 ವಿನೋದ್ ದುವಾ (Photo: twitter)

ಹೊಸದಿಲ್ಲಿ: ಈ ವರ್ಷದ ಆರಂಭದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಪತ್ರಕರ್ತ ವಿನೋದ್ ದುವಾ ಅವರು ಐಸಿಯುನಲ್ಲಿದ್ದಾರೆ ಹಾಗೂ  ಅವರ ಆರೋಗ್ಯ ಸ್ಥಿತಿಯು ‘ಗಂಭೀರವಾಗಿದೆ’ಎಂದು ಅವರ ಪುತ್ರಿ, ನಟಿ  ಮಲ್ಲಿಕಾ ದುವಾ ಸೋಮವಾರ ಹೇಳಿದ್ದಾರೆ.

67 ವರ್ಷದ  ದುವಾ  ದೂರದರ್ಶನ ಹಾಗೂ  ಎನ್‌ಡಿಟಿವಿಯಲ್ಲಿ ಹಿಂದಿ ಪತ್ರಕರ್ತರಾಗಿ ಪ್ರಸಿದ್ಧರಾಗಿದ್ದರು. ಕೋವಿಡ್‌ನೊಂದಿಗಿನ ಸುದೀರ್ಘ ಹೋರಾಟದಲ್ಲಿ  ಜೂನ್‌ನಲ್ಲಿ ಅವರ  ಪತ್ನಿ ರೇಡಿಯಾಲಜಿಸ್ಟ್ ಪದ್ಮಾವತಿ  ದುವಾ ನಿಧನರಾಗಿದ್ದರು.

ಎರಡನೇ ಕೋವಿಡ್ ಅಲೆಯು  ಉತ್ತುಂಗದಲ್ಲಿದ್ದಾಗ ವಿನೋದ್ ದುವಾ ಹಾಗೂ  ಅವರ ಪತ್ನಿ ಗುರ್ಗಾಂವ್‌ನ ಆಸ್ಪತ್ರೆಯಲ್ಲಿದ್ದರು. ಅಂದಿನಿಂದ ಕೋವಿಡ್ ನಂತರದ ಅನಾರೋಗ್ಯ ಸಮಸ್ಯೆಗಳು ವಿನೋದ್ ಅವರನ್ನು ಕಾಡುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News