×
Ad

ಗಲಭೆ ಯೋಜನೆ ಬಗ್ಗೆ ತಿಳಿದಿದ್ದರೆ ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ: ಉಮರ್ ಖಾಲಿದ್ ವಕೀಲರ ಪ್ರಶ್ನೆ

Update: 2021-11-30 00:04 IST

ಹೊಸದಿಲ್ಲಿ, ನ. 29: ಸ್ಥಳೀಯ ಸಂರಕ್ಷಿತ ಸಾಕ್ಷಿಯೊಬ್ಬರು ಎಸ್‌ಎಚ್‌ಒ ಅವರೊಂದಿಗೆ ಸಂಪರ್ಕದಲ್ಲಿದ್ದು, ಗಲಭೆ ಯೋಜಿಸುತ್ತಿರುವ ಬಗ್ಗೆ ಮಾಹಿತಿ ನೀಡುತ್ತಿದ್ದರೂ ಈಶಾನ್ಯ ದಿಲ್ಲಿ ಗಲಭೆಗೆ ಪೊಲೀಸರು ಯಾಕೆ ಅವಕಾಶ ನೀಡಿದರು? ಎಂದು ಜೆಎನ್‌ಯುನ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರ ವಕೀಲ ದಿಲ್ಲಿ ಉಚ್ಚ ನ್ಯಾಯಾಲಯವನ್ನು ಸೋಮವಾರ ಪ್ರಶ್ನಿಸಿದರು.

ಜಾಮೀನಿಗಾಗಿ ಉಮರ್ ಖಾಲಿದ್ ಪರವಾಗಿ ಹಿರಿಯ ವಕೀಲ ತ್ರಿದೀಪ್ ಪಾಯಸ್ ಅವರು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಮಿತಾಬ್ ರಾವತ್ ಅವರ ಮುಂದೆ ವಾದ ಮಂಡಿಸಿದರು. ಆದರೆ, ಅವರ ವಾದ ಪೂರ್ಣಗೊಂಡಿಲ್ಲ. ಡಿಸೆಂಬರ್ 9ರಂದು ಮುಂದುವರಿಯಲಿದೆ. ಹಿಂದಿನ ವಿಚಾರಣೆ ಸಂದರ್ಭ ಪಾಯಸ್ ಅವರು ಯುಎಪಿಎ ಪ್ರಕರಣದ ಸಾಕ್ಷಿಗಳ ಹೇಳಿಕೆಗಳು ಕಪೋಲಕಲ್ಪಿತ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News