ಶರ್ಜೀಲ್ ಇಮಾಮ್ ಭಾಷಣ ಹಿಂಸಾಚಾರಕ್ಕೆ ಪ್ರಚೋದಿಸಿಲ್ಲ: ಅಲಹಾಬಾದ್ ಹೈಕೋರ್ಟ್

Update: 2021-11-30 08:13 GMT
ಶರ್ಜೀಲ್ ಇಮಾಮ್ (Photo: facebook)

ಹೊಸದಿಲ್ಲಿ: ದೇಶದ್ರೋಹ ಪ್ರಕರಣದಲ್ಲಿ ಶರ್ಜೀಲ್ ಇಮಾಮ್ ಗೆ ಕಳೆದ ವಾರ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್, ಇಮಾಮ್ ಅವರ ಭಾಷಣವು ಯಾರಿಗೂ ಶಸ್ತ್ರಾಸ್ತ್ರಗಳನ್ನು ಹೊಂದಲು ಕರೆ ನೀಡಿಲ್ಲ ಅಥವಾ ಅವರು ಯಾವುದೇ ಹಿಂಸಾಚಾರವನ್ನು ಪ್ರಚೋದಿಸಿಲ್ಲ ಎಂದು ತನ್ನ ತೀರ್ಪಿನಲ್ಲಿ  ಹೇಳಿದೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಿಎಎ-ಎನ್ ಆರ್ ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ 'ದೇಶ ವಿರೋಧಿ ಭಾಷಣ' ಮಾಡಿದ ಆರೋಪದ ಮೇಲೆ ಕಳೆದ ವರ್ಷ ಅಲಿಘರ್ ನಲ್ಲಿ ಅವರ ವಿರುದ್ಧ ತ್ವರಿತ ಪ್ರಕರಣವನ್ನು ದಾಖಲಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಮುಖ್ಯವಾಗಿ, ಈ ತಪ್ಪಿಗೆ ಅವರು ಅನುಭವಿಸಬಹುದಾದ ಗರಿಷ್ಠ ಶಿಕ್ಷೆ ಮೂರು ವರ್ಷಗಳಿಗೆ ವಿರುದ್ಧವಾಗಿ ಅವರು 1 ವರ್ಷ ಹಾಗೂ ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರು ಎಂದು ಗಮನಿಸಿದ ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಅವರ ಪೀಠವು ರೂ. 50 ಸಾವಿರ  ವೈಯಕ್ತಿಕ ಬಾಂಡ್ ಅನ್ನು ಒದಗಿಸಿದ ಮೇಲೆ ಅವರಿಗೆ ಜಾಮೀನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News