1983 ರ ಐತಿಹಾಸಿಕ ವಿಶ್ವಕಪ್ ಗೆಲುವಿನ ಕುರಿತ 83 ಚಿತ್ರದ ಟ್ರೇಲರ್ ಬಿಡುಗಡೆ

Update: 2021-11-30 16:31 GMT
Photo: Twitter/@RanveerOfficial

1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕುರಿತ  ಬಹುನಿರೀಕ್ಷಿತ 83 ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿರುವ, ಕಬೀರ್ ಖಾನ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಪಿಲ್ ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. 

83 ರ ತಂಡದ ಇತರ ಪ್ರಮುಖ ಆಟಗಾರರ ಪಾತ್ರದಲ್ಲಿ ತಾಹಿರ್ ರಾಜ್ ಬಾಸಿನ್, ಜೀವ, ಸಾಖಿಬ್ ಸಲೀಂ, ಜತಿನ್ ಸರ್ನಾ, ಚಿರಾಗ್ ಪಾಟೀಲ್, ದಿನಕರ್ ಶರ್ಮ ಮತ್ತಿತರರು ನಟಿಸಿದ್ದು ಕೋಚ್ ಪಿ ಆರ್ ಮಾನ್ ಸಿಂಗ್ ಪಾತ್ರದಲ್ಲಿ ಖ್ಯಾತ ನಟ ಪಂಕಜ್ ತ್ರಿಪಾಠಿ ಇದ್ದಾರೆ. 

ತೀರಾ ದುರ್ಬಲ ತಂಡವೆಂಬ ಹಣೆಪಟ್ಟಿ ಹೊತ್ತುಕೊಂಡು ಹೋಗಿ ಮೊದಲು ಸತತ ಸೋಲುಂಡು ಬಳಿಕ ಪುಟಿದೆದ್ದು ವಿಶ್ವಕಪ್ಪನ್ನೇ ಗೆದ್ದು ಜಗತ್ತನ್ನು ಅಚ್ಚರಿಯಲ್ಲಿ ಕೆಡವಿದ ಕಫಿಲ್ಸ್ ಡೆವಿಲ್ಸ್ ಸಾಧನೆ ಇದೀಗ ಬೆಳ್ಳಿತೆರೆಯಲ್ಲಿ ಮೂಡಿಬರುತ್ತಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. 

ಹಿಂದಿ, ತಮಿಳು, ತೆಲುಗು, ಕನ್ನಡ ಹಾಗು ಮಲಯಾಳಂ ಭಾಷೆಗಳಲ್ಲಿ 3ಡಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. 

ಚಿತ್ರದಲ್ಲಿ ರಣವೀರ್ ನಟನೆಗೆ ಈಗಾಗಲೇ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಲಿದೆ ಎಂದು ಚಿತ್ರರಂಗ ಹೇಳುತ್ತಿದೆ.

ಬಿಡುಗಡೆಯಾದ 11 ಗಂಟೆಗಳೊಳಗೆ  ಸುಮಾರು 2.5 ಕೋಟಿ ವೀವ್ಸ್ ಪಡೆದಿರುವ ಈ ಟ್ರೇಲರ್ ಇಲ್ಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News