ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 8 ರೂ. ಕಡಿತ ಮಾಡಿದ ದಿಲ್ಲಿ ಸರಕಾರ

Update: 2021-12-01 08:22 GMT

ಹೊಸದಿಲ್ಲಿ: ದಿಲ್ಲಿ ಸರಕಾರ ಬುಧವಾರ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) 30 ಶೇ.ದಿಂದ 19.40ಶೇ. ಕ್ಕೆ ಇಳಿಸಿದೆ.

ಕಡಿತದ ನಂತರ  ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್  ದರವನ್ನು ಲೀಟರ್‌ಗೆ  ರೂ. 8 ಕಡಿತಗೊಳಿಸಲಾಗುತ್ತದೆ. ಹೊಸ ಬೆಲೆಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.

ಏತನ್ಮಧ್ಯೆ, ಸತತ 27 ದಿನಗಳ ಕಾಲ ಇಂಧನ ಬೆಲೆಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಇದಕ್ಕೂ ಮುನ್ನ ನವೆಂಬರ್ 4 ರಂದು, ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ದಾಖಲೆಯ ಗರಿಷ್ಠ ಮಟ್ಟದಿಂದ ದರಗಳನ್ನು ಸ್ವಲ್ಪ ಕಡಿಮೆಗೊಳಿಸಿತು.

ದಿಲ್ಲಿಯಲ್ಲಿ, ಪೆಟ್ರೋಲ್ ದರ ಪ್ರಸ್ತುತ ರೂ.103.97 ಕ್ಕೆ ಮಾರಾಟವಾಗುತ್ತಿದೆ; ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ ಡೀಸೆಲ್ ದರ ರೂ. 86.67 ರಷ್ಟಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 109.98 ರಂತೆ ಮಾರಾಟವಾಗುತ್ತದೆ; ಡೀಸೆಲ್ ಪ್ರತಿ ಲೀಟರ್‌ಗೆ  ರೂ. 94.14ರಂತೆ ಮಾರಾಟವಾಗುತ್ತಿದೆ.

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಇಂಧನ ದರವು ಗರಿಷ್ಠವಾಗಿದೆ. ವ್ಯಾಟ್ ನಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಇಂಧನ ದರ ವ್ಯತ್ಯಾಸವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News