×
Ad

ಅಗತ್ಯವಿರುವ ಬಡ ಮಕ್ಕಳಿಗೆ ನೀಡಿ: ಪೋಸ್ಟರಿಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳಲ್ಲಿ ಸಲ್ಮಾನ್ ಖಾನ್ ವಿನಂತಿ

Update: 2021-12-02 17:31 IST
Photo: instagram.com/beingsalmankhan

ಮುಂಬೈ: ತಮ್ಮ ಅಭಿನಯದ ಚಿತ್ರ 'ಅಂತಿಮ್-ದಿ ಫೈನಲ್ ಟ್ರುತ್' ಬಿಡುಗಡೆಗೊಂಡ ಖುಷಿಯಲ್ಲಿರುವ ನಟ ಸಲ್ಮಾನ್ ಖಾನ್ ಅದೇ ಸಮಯ  ತಮ್ಮ ಅಭಿಮಾನಿಗಳು ತಮ್ಮ ಚಿತ್ರದ ಪೋಸ್ಟರಿಗೆ ಹಾಲಿನ ಅಭಿಷೇಕ ಮಾಡಿರುವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಾದ ವೀಡಿಯೋ ಒಂದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಸಲ್ಮಾನ್, "ಹಾಲನ್ನು ಪೋಲು ಮಾಡಬೇಡಿ, ಬದಲು ಅಗತ್ಯವಿರುವವರಿಗೆ ನೀಡಿ,'' ಎಂದು ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

"ನಮ್ಮಲ್ಲಿ ಹಲವರಿಗೆ ಕುಡಿಯಲು ಯೋಗ್ಯ ನೀರು ಕೂಡ ದೊರೆಯುವುದಿಲ್ಲ. ಹೀಗಿರುವಾಗ ನೀವು ಹಾಲನ್ನು ಪೋಲು ಮಾಡುತ್ತಿದ್ದೀರಿ. ನನ್ನ ಅಭಿಮಾನಿಗಳಿಗೆ ಒಂದು ವಿನಂತಿ, ನಿಮಗೆ ಹಾಲು ಕೊಡಬೇಕೆಂದಿದ್ದರೆ ಅಗತ್ಯವಿರುವವರಿಗೆ ನೀಡಿ. ಹಾಲು ದೊರೆಯದ ಬಡ ಮಕ್ಕಳಿಗೆ ಕುಡಿಯಲು ನೀಡಿ,'' ಎಂದು ಸಲ್ಮಾನ್ ಬರೆದಿದ್ದಾರೆ.

ತಮ್ಮ ಅಭಿಮಾನಿಗಳು ಥಿಯೇಟರ್ ಒಳಗಡೆ ಪಟಾಕಿ ಸಿಡಿಸುತ್ತಿರುವ ವೀಡಿಯೊವನ್ನು ಬುಧವಾರವಷ್ಟೇ ಪೋಸ್ಟ್ ಮಾಡಿದ್ದ ಸಲ್ಮಾನ್,  ಹಾಗೆ ಮಾಡದಂತೆ ವಿನಂತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News