ಕೇವಲ ಶೇ. 49 ಜನರು ಮಾತ್ರ ಕೋವಿಡ್ ಲಸಿಕೆಯ 2ನೇ ಡೋಸ್ ಸ್ವೀಕರಿಸಿದ್ದಾರೆ: ದತ್ತಾಂಶ

Update: 2021-12-03 18:38 GMT

ಹೊಸದಿಲ್ಲಿ, ಡಿ. 3: ರಾಷ್ಟ್ರ ವ್ಯಾಪಿ ‘‘ಹರ್ ಘರ್ ದಸ್ತಕ್’’ ಕೋವಿಡ್ ಲಸಿಕೆ ಅಭಿಯಾನದ ಫಲವಾಗಿ ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡವರ ಸಂಖ್ಯೆಯಲ್ಲಿ ಶೇ. 5.9 ಏರಿಕೆ (ನವೆಂಬರ್ 30ರ ವರೆಗೆ) ಹಾಗೂ ಎರಡನೇ ಡೋಸ್ ತೆಗೆದುಕೊಂಡವರ ಸಂಖ್ಯೆಯಲ್ಲಿ ಶೇ. 11.7 ಏರಿಕೆಯಾದರೂ ಕೇವಲ ಶೇ. 49 ಜನರು ಮಾತ್ರ ಎರಡನೇ ಡೋಸ್ ತೆಗೆದುಕೊಂಡಿರುವುದು ದತ್ತಾಂಶದಿಂದ ಬಹಿರಂಗಗೊಂಡಿದೆ. ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ ಲಸಿಕೆಯ ಡೋಸ್ ಗುರುವಾರ 125 ಕೋಟಿ ದಾಟಿದೆ. ಆದರೆ, 79.13 ಕೋಟಿ (ಶೇ. 84.3) ಫಲಾನುಭವಿಗಳು ಮೊದಲ ಡೋಸ್ ಮಾತ್ರ ತೆಗೆದುಕೊಂಡಿದ್ದಾರೆ. ಶೇ. 45.82 ಕೋಟಿ (ಶೇ. 49) ಫಲಾನುಭವಿಗಳು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಹೇಳಿಕೆ ತಿಳಿಸಿದೆ. ದತ್ತಾಂಶದ ಪ್ರಕಾರ 18ರಿಂದ 44 ವಯೋಮಾನದ 46,28,14,781 ಜನರು ಮೊದಲ ಡೋಸ್ ತೆಗೆದುಕೊಂಡರೆ, 23,38,72,325 ಜನರು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಅದೇ ರೀತಿ 45ರಿಂದ 59 ವಯೋಮಾನದ 18,57,50,859 ಜನರು ಮೊದಲ ಡೋಸ್ ತೆಗೆದುಕೊಂಡರೆ, 12,33,19,876 ಜನರು ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. 60 ಪ್ರಾಯ ಗುಂಪಿನ 8,06,10,843 ಜನರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರೆ, 11,63,10,847 ಜನರು ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News