ಹಿರಿಯ ಪತ್ರಕರ್ತ ವಿನೋದ್ ದುವಾ ನಿಧನ

Update: 2021-12-04 19:37 GMT
ವಿನೋದ್ ದುವಾ (Photo: twitter)

ಹೊಸದಿಲ್ಲಿ: ಹಿರಿಯ ಪತ್ರಕರ್ತ ವಿನೋದ್ ದುವಾ (67) ಅವರು ದಿಲ್ಲಿಯ ಅಪೊಲೊ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ.

ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ದಿಲ್ಲಿಯ ಲೋದಿ ಚಿತಾಗಾರದಲ್ಲಿ ರವಿವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಅವರ ಪುತ್ರಿ, ನಟಿ ಮಲ್ಲಿಕಾ ದುವಾ ತಿಳಿಸಿದ್ದಾರೆ.

ಅಪೊಲೋ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ ವಿನೋದ್ ದುವಾ ಅವರು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವಿನೋದ್ ದುವಾ ಅವರು ದೂರದರ್ಶನ ಹಾಗೂ ಎನ್‌ಡಿಟಿವಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರನ್ನು ಪ್ರಸಾರ ಪತ್ರಿಕೋದ್ಯಮದ ಪ್ರವರ್ತಕ ಎಂದು ಪರಿಗಣಿಸಲಾಗಿತ್ತು.

ಅವರ ಪತ್ನಿ ಹಾಗೂ ರೇಡಿಯೋಲಜಿಸ್ಟ್ ಪದ್ಮಾವತಿ ಚಿನ್ನಾ ದುವಾ ಅವರು ಕೋವಿಡ್ ಸೋಂಕಿನಿಂದ ಜೂನ್‌ನಲ್ಲಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News