ನಾಗಾಲ್ಯಾಂಡ್ ಸೇನಾ ಕಾರ್ಯಾಚರಣೆ: ದುಃಖತಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ 12 ಮೃತದೇಹಗಳ ಸಾಮೂಹಿಕ ದಫನ

Update: 2021-12-07 06:31 GMT
Photo: Twitter/SaniaAhmad1111

ಕೊಹಿಮಾ :  ನಾಗಾಲ್ಯಾಂಡ್‍ನ ಮೊನ್ ಜಿಲ್ಲೆಯಲ್ಲಿ ಕಳೆದ ಶನಿವಾರ ಮತ್ತು ಭಾನುವಾರ ತಪ್ಪಾದ ಗುರುತಿಸುವಿಕೆಯಿಂದಾಗಿ ಸೇನೆಯ 21 ಪ್ಯಾರಾ ಮಿಲಿಟರಿ ಪಡೆಯ ಕಾರ್ಯಾಚರಣೆಯೊಂದರಲ್ಲಿ ಮೃತರಾದ 14 ಮಂದಿ ನಾಗರಿಕರ ಪೈಕಿ 12 ಮಂದಿಯನ್ನು ಕಳೆದ ರಾತ್ರಿ ಓಟಿಂಗ್ ಗ್ರಾಮದಲ್ಲಿ ಸಾಮೂಹಿಕವಾಗಿ ದಫನ ಮಾಡಲಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ರೋದನ ಈ ಸಂದರ್ಭ ಮುಗಿಲುಮುಟ್ಟಿತ್ತು ಎಂದು ndtv.com ವರದಿ ಮಾಡಿದೆ.

ಕೆಲವು ಕಳೇಬರಗಳನ್ನು ಶವಪೆಟ್ಟಿಗೆಯಲ್ಲಿರಿಸಿದ್ದರೆ ಇನ್ನು ಕೆಲವು ಕಳೇಬರಗಳ ಮೇಳೆ ಬಿಳಿಯ ವಸ್ತ್ರ ಹೊದಿಸಲಾಗಿತ್ತು. ಹಾಗೂ ಕೆಲವಲ್ಲಿ ಕೆಂಪು ಕ್ರಾಸ್ ಕೂಡ ಕಾಣಿಸುತ್ತಿತ್ತು.

ಮೃತರಲ್ಲಿ ಒಬ್ಬ ವ್ಯಕ್ತಿ ತನ್ನ ಪತ್ನಿ ಹಾಗೂ ಎರಡು ತಿಂಗಳ ಮಗುವನ್ನು ಅಗಲಿದ್ದರೆ, ತನ್ನ ಒಂದು ಮಗನನ್ನು ಈ ದುರಂತದಲ್ಲಿ ಕಳೆದುಕೊಂಡಿರುವ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರ ಇನ್ನೊಂದು ಪುತ್ರ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಈ ಘಟನೆಯನ್ನು ತನ್ನ ಪುತ್ರನನ್ನು ಕಳೆದುಕೊಂಡ ತಾಯಿಯೊಬ್ಬರು ಇನ್ನೂ ಮಾಸಿಕ ಆಘಾತ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News