ಗುರುಗ್ರಾಮದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲೂ ಮುನವ್ವರ್‌ ಫಾರೂಕಿಗೆ ಅವಕಾಶ ನಿರಾಕರಣೆ !

Update: 2021-12-07 07:03 GMT

ಗುರುಗ್ರಾಮ: ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರನ್ನು ಬಿಜೆಪಿ ಹರಿಯಾಣ ಘಟಕದ ಐಟಿ ವಿಭಾಗದ ಮುಖ್ಯಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯಲ್ಲಿ ಇಲ್ಲಿ ನಡೆಯಲಿರುವ ಮೂರು ದಿನಗಳ ಹಾಸ್ಯ ಕಾರ್ಯಕ್ರಮದಿಂದ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

ಗುರುಗ್ರಾಮ ಪೊಲೀಸರಿಗೆ ನೀಡಿದ ದೂರಿನಲ್ಲಿ, ಹರಿಯಾಣ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅರುಣ್ ಯಾದವ್, ಫಾರೂಕಿ ತಮ್ಮ ನಂಬಿಕೆಯನ್ನು, ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿ ಲೈವ್ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳಂತಹ ಮುಕ್ತ ವೇದಿಕೆಗಳಲ್ಲಿ ನಿರಂತರವಾಗಿ ಹಾಗೆಯೇ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ಅವರ ಚಟುವಟಿಕೆಗಳು ನನ್ನ ಹಿಂದೂ ನಂಬಿಕೆಗೆ ಧಕ್ಕೆ ತಂದಿವೆ. ಕೋಮು ಸೌಹಾರ್ದತೆಯನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗುತ್ತಿದೆ" ಎಂದು ಯಾದವ್ ದೂರಿನಲ್ಲಿ ಹೇಳಿದ್ದಾರೆ. ಮುನವ್ವರ್‌ ಫಾರೂಕಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವ ಕೆಲವು ವೀಡಿಯೊಗಳನ್ನು ಅವರು ಉಲ್ಲೇಖಿಸಿದ್ದಾರೆ. ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ದೂರಿನ ಪ್ರತಿಯನ್ನು ಸಹ ಪ್ರಕಟಿಸಿದ್ದಾರೆ.

ಡಿಸೆಂಬರ್ 17-19 ರವರೆಗೆ ಗುರುಗ್ರಾಮದ ಐರಿಯಾ ಮಾಲ್‌ನಲ್ಲಿ ನಡೆಯಲಿರುವ ಗುರ್‌ಗಾಂವ್ ಕಾಮಿಡಿ ಫೆಸ್ಟಿವಲ್‌ನಲ್ಲಿ ಫಾರೂಕಿ ಪ್ರದರ್ಶನ ನೀಡಬೇಕಿತ್ತು. ಪ್ರಚಾರದ ಪೋಸ್ಟರ್‌ಗಳಿಂದ ಅವರ ಹೆಸರನ್ನು ಸಂಘಟಕರಾದ ದಿ ಎಂಟರ್‌ಟೈನ್‌ಮೆಂಟ್ ಫ್ಯಾಕ್ಟರಿ ತೆಗೆದುಹಾಕಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News