ಬಿಪಿನ್ ರಾವತ್ ಅವರನ್ನು 'ಪತ್ರಕರ್ತ ವಿ.ಕೆ ಸಿಂಗ್‌ʼ ಎಂದ ಟಿವಿ ನಿರೂಪಕ ದೀಪಕ್ ಚೌರಾಸಿಯಾ!

Update: 2021-12-11 09:02 GMT

ಹೊಸದಿಲ್ಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದ ನೇರ ಪ್ರಸಾರ ಕಾರ್ಯಕ್ರಮವೊಂದನ್ನು ನಿರೂಪಿಸುತ್ತಿದ್ದ ಆಂಕರ್ ದೀಪಕ್ ಚೌರಾಸಿಯಾ ಈ ಸಂದರ್ಭ ತಡಬಡಿಸುತ್ತಿದ್ದರು ಮತ್ತು ವಿಚಿತ್ರವಾಗಿ ವರ್ತಿಸುತ್ತಿದ್ದ ವೀಡಿಯೋ ವೈರಲ್‌ ಆಗಿದೆ. "ಅವರು ಮದ್ಯದ ನಶೆಯಲ್ಲಿದ್ದರೇ?" ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರು ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಒಂದು  ವಾಕ್ಯ ಪೂರ್ಣಗೊಳಿಸಲು ಬಹಳಷ್ಟು ತಡವರಿಸಿದ ಚೌರಾಸಿಯಾ ಒಂದು ಹಂತದಲ್ಲಿ ಜನರಲ್ ರಾವತ್ ಅವರನ್ನು  ಪತ್ರಕರ್ತರೆಂದೂ ಹೇಳಿಕೊಂಡರು. ಆಡಳಿತ ಪಕ್ಷದ ಪರ ಇದ್ದಾರೆಂದು ಈಗಾಗಲೇ ಟೀಕೆಗೊಳಗಾಗಿರುವ ಚೌರಾಸಿಯಾ ಈ ನಿರ್ದಿಷ್ಟ ಕಾರ್ಯಕ್ರಮದ ವೇಳೆ  ಎಂದಿನಂತಿರಲಿಲ್ಲ ಎಂದು ಹಲವರು ಅಂದುಕೊಂಡಿದ್ದಾರೆ.

"ಇದೇನು? ಅವರು ಮದ್ಯದ ನಶೆಯಲ್ಲಿದ್ದಾರೆ ಅಥವಾ ನಿದ್ದೆಯ ಮಂಪರಿನಲ್ಲಿದ್ದಾರೆ. ಪತ್ರಕರ್ತ, ವಿಪಿ ಸಿಂಗ್ ಏನಿದು?" ಎಂದು  ಒಬ್ಬ ಟ್ವಿಟ್ಟರಿಗರು ಪ್ರಶ್ನಿಸಿದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ದೀಪಕ್ ಚೌರಾಸಿಯಾ ಅವರಿಗೆ ಏನಾಗಿದೆ. ಇಂದು ಅವರು ಮಾತನಾಡಿದ್ದು ಯಾವುದೂ ಅರ್ಥಗರ್ಭಿತವಾಗಿಲ್ಲ. ಜನರಲ್ ಬಿಪಿನ್ ರಾವತ್ ಅವರನ್ನು ವಿ ಪಿ ಸಿಂಗ್ ಎಂದರು ಹಾಗೂ ಇನ್ನೂ ಹಲವಾರು ಪ್ರಮಾದಗಳು, ಎಂದು ಟ್ವೀಟ್ ಮಾಡಿದ್ದಾರೆ.

ಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರು ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಒಂದು  ವಾಕ್ಯ ಪೂರ್ಣಗೊಳಿಸಲು ಬಹಳಷ್ಟು ತಡವರಿಸಿದ ಚೌರಾಸಿಯಾ ಒಂದು ಹಂತದಲ್ಲಿ ಜನರಲ್ ರಾವತ್ ಅವರನ್ನು  ಪತ್ರಕರ್ತರೆಂದೂ ಹೇಳಿಕೊಂಡರು. ಆಡಳಿತ ಪಕ್ಷದ ಪರ ಇದ್ದಾರೆಂದು ಈಗಾಗಲೇ ಟೀಕೆಗೊಳಗಾಗಿರುವ ಚೌರಾಸಿಯಾ ಈ ನಿರ್ದಿಷ್ಟ ಕಾರ್ಯಕ್ರಮದ ವೇಳೆ  ಎಂದಿನಂತಿರಲಿಲ್ಲ ಎಂದು ಹಲವರು ಅಂದುಕೊಂಡಿದ್ದಾರೆ.

"ಇದೇನು? ಅವರು ಮದ್ಯದ ನಶೆಯಲ್ಲಿದ್ದಾರೆ ಅಥವಾ ನಿದ್ದೆಯ ಮಂಪರಿನಲ್ಲಿದ್ದಾರೆ. ಪತ್ರಕರ್ತ, ವಿಪಿ ಸಿಂಗ್ ಏನಿದು?" ಎಂದು  ಒಬ್ಬ ಟ್ವಿಟ್ಟರಿಗರು ಪ್ರಶ್ನಿಸಿದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ದೀಪಕ್ ಚೌರಾಸಿಯಾ ಅವರಿಗೆ ಏನಾಗಿದೆ. ಇಂದು ಅವರು ಮಾತನಾಡಿದ್ದು ಯಾವುದೂ ಅರ್ಥಗರ್ಭಿತವಾಗಿಲ್ಲ. ಜನರಲ್ ಬಿಪಿನ್ ರಾವತ್ ಅವರನ್ನು ವಿ ಪಿ ಸಿಂಗ್ ಎಂದರು ಹಾಗೂ ಇನ್ನೂ ಹಲವಾರು ಪ್ರಮಾದಗಳು, ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News